ಮೆಗಾ ಹರಾಜಿಗೂ ಮುನ್ನವೇ ಐಪಿಎಲ್‌ ಆಟಗಾರರಿಗೆ ಬಿಸಿಸಿಐ ಭರ್ಜರಿ ಉಡುಗೊರೆ
ಮುಂಬೈ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. 2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಆಟಗಾರರಿಗೆ ಭರ್ಜರಿ ಉಡುಗೊರೆ ನೀಡಿದೆ. ಟೂರ್ನಿ ವೇಳೆ ಲೀಗ್‌ ಪಂ
,29 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್ :


ಮುಂಬೈ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. 2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಆಟಗಾರರಿಗೆ ಭರ್ಜರಿ ಉಡುಗೊರೆ ನೀಡಿದೆ. ಟೂರ್ನಿ ವೇಳೆ ಲೀಗ್‌ ಪಂದ್ಯಅಗಳನ್ನಾಡುವ ಪ್ರತಿಯೊಬ್ಬ ಆಟಗಾರನೂ ಹರಾಜಿನಲ್ಲಿ ನಿಗದಿಯಾದ ಮೊತ್ತಕ್ಕಿಂತ ಹೆಚ್ಚುವರಿ ನಗದು ಹಣವನ್ನು ಪಡೆಯಲಿದ್ದಾರೆ ಎಂದು ಬಿಸಿಸಿಐ ಘೋಷಣೆ ಮಾಡಿದೆ.

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಈವರೆಗಿನ ಲೀಗ್‌ನಲ್ಲಿ ಆಟಗಾರರು ಹರಾಜಿನಲ್ಲಿ ಪಡೆದ ಮೊತ್ತ ಪಡೆಯುತ್ತಿದ್ದರು. ಇದರೊಂದಿಗೆ ಸೂಪರ್‌ ಸಿಕ್ಸ್‌, ಬೌಂಡರಿ, ಕ್ಯಾಚ್‌, ಎಲೆಕ್ಟ್ರಿಕ್‌ ಸ್ಟ್ರೈಕರ್‌, ಪ್ಲೇಯರ್‌ ಆಫ್‌ದಿ ಮ್ಯಾಚ್‌, ಪ್ಲೇಯರ್‌ ಆಫ್‌ ದಿ ಸೀರಿಸ್‌ ಮೂಲಕ ಹೆಚ್ಚುವರಿ ನಗದು ಬಹುಮಾನ ಪಡೆಯುತ್ತಿದ್ದರು. ಇನ್ಮುಂದೆ ಇದರ ಹೊರತಾಗಿ ಪ್ರತಿ ಲೀಗ್‌ ಪಂದ್ಯದಲ್ಲೂ ಆಟಗಾರರು ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಗಳಿಸಲಿದ್ದಾರೆ.

ಜಯ್‌ ಶಾ ಎಕ್ಸ್‌ ಖಾತೆಯಲ್ಲಿ ಏನಿದೆ?

ಐತಿಹಾಸಿಕ ಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕವನ್ನು ಘೋಷಿಸಿದೆ. ಹರಾಜಿನಲ್ಲಿ ಬಿಕರಿಯಾದ ನಂತರ ಕಾಂಟ್ರ್ಯಾಕ್ಟ್‌ನೊಂದಿಗೆ ಪ್ರತಿ ಆಟಗಾರನೂ ಒಂದು ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯುತ್ತಾರೆ. ಈ ಪೈಕಿ ಆಟಗಾರನೊಬ್ಬ ಒಂದು ಋತುವಿನಲ್ಲಿ ಎಲ್ಲಾ ಲೀಗ್‌ ಪಂದ್ಯಗಳನ್ನು ಆಡಿದರೆ, ಹರಾಜಿನಲ್ಲಿ ನಿಗದಿಯಾದ ಹಣ ಹೊರತುಪಡಿಸಿ, ಹೆಚ್ಚುವರಿಯಾಗಿ 1.05 ಕೋಟಿ ರೂ. ಹೆಚ್ಚುವರಿ ಲಾಭ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿ ಮೀಸಲಿಡುತ್ತವೆ. ಐಪಿಎಲ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಆಟಗಾರರಲ್ಲಿ ಅತ್ತುತ್ತಮ ಪ್ರದರ್ಶನಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande