ಬೆಂಗಳೂರು, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ತೆಲುಗು ಚಿತ್ರ ನಟ ಜೂ ಎನ್ಟಿಆರ್ ನಟನೆಯ ‘ದೇವರ’ ಚಲನ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಸಹ ಜೂ ಎನ್ಟಿಆರ್ಗೆ ದೊಡ್ಡ ಅಭಿಮಾನಿ ಬಳಗ ಇದ್ದು, ‘ದೇವರ’ ಚಲನ ಚಿತ್ರವನ್ನು ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ರಾಯಚೂರು, ಚಿತ್ರದುರ್ಗ, ಗಂಗಾವತಿ ಮತ್ತು ಬಳ್ಳಾರಿಯಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು, ಮದುವೆ ಸ್ವಾಗತಕ್ಕೆ ಹಾಕುವಂತೆ ಚಿತ್ರಮಂದಿರಕ್ಕೆ ಹೂವಿನ ನಾಮಫಲಕ ಹಾಕಿದ್ದಾರೆ. ಜೂ ಎನ್ಟಿಆರ್, ಅಭಿಮಾನಿಗಳ ಬಗ್ಗೆ ಹೇಳಿದ ಮಾತನ್ನು ನಾಮಫಲಕದ ಮೇಲೆ ಬರೆಸಿದ್ದಾರೆ.
ಮುಳಬಾಗಿಲು ಅಭಿಮಾನಿಗಳು ‘ದೇವರ’ ಚಲನ ಚಿತ್ರದಲ್ಲಿನ ಜೂ ಎನ್ಟಿಆರ್ ನ ದೊಡ್ಡ ಕಟೌಟ್ ಮಾಡಿಸಿ, ತಮ್ಮ ಚಿತ್ರಗಳನ್ನೂ ಸಹ ಅದರ ಜೊತೆಗೆ ಹಾಕಿಸಿದ್ದಾರೆ.
ಬೆಂಗಳೂರಿನ ಚಿತ್ರಮಂದಿರ ಒಂದರ ಮುಂದೆ ಜೂ ಎನ್ಟಿಆರ್ ಅವರ ದೊಡ್ಡ ಕಟೌಟ್ ನಿಲ್ಲಿಸಿ, ಸಿನಿಮಾ ಬಿಡುಗಡೆಗೂ ಕಾಯದೆ, ಕಟೌಟ್ ಮುಂದೆಯೇ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ವಿಡಿಯೋ ಈಗಾಗಲೇ ವೈರಲ್ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು ಎನ್ಟಿಆರ್ ಕಟೌಟ್, ಬ್ಯಾನರ್ಗಳಿಂದ ಇಡೀ ಗೌರಿಶಂಕರ್ ಚಿತ್ರಮಂದಿರವನ್ನೇ ತುಂಬಿಸಿಬಿಟ್ಟಿದ್ದಾರೆ.
‘ದೇವರ’ ಚಲನಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜಾನ್ಹವಿ ಕಪೂರ್ ನಾಯಕಿ, ಬಾಲಿವುಡ್ನ ಸೈಫ್ ಅಲಿ ಖಾನ್ ವಿಲನ್. ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್