ಮಧ್ಯಪ್ರದೇಶದ ಯುವಕನ ಬಂಧನ, 1.21 ಕೋಟಿ ರೂಪಾಯಿ ಜಪ್ತಿ
ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಆರ್ಥಿಕ, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದ ಯುವಕನನ್ನು ಬಂಧಿಸಿ ಆತನಿಂದ 1,21,04,500/- ರೂಪಾಯಿಗಳು ನಗದು ಹಣ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿ
ಬಳ್ಳಾರಿ ಸೈಬರ್ ಕ್ರೈಮ್ ಪೊಲೀಸರ ಕಾರ್ಯಾಚರಣೆ :  ಯುವಕನ ಬಂಧನ 1,21,04,500 ರೂಪಾಯಿ ಜಪ್ತಿ


ಬಳ್ಳಾರಿ ಸೈಬರ್ ಕ್ರೈಮ್ ಪೊಲೀಸರ ಕಾರ್ಯಾಚರಣೆ :  ಯುವಕನ ಬಂಧನ 1,21,04,500 ರೂಪಾಯಿ ಜಪ್ತಿ


ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಆರ್ಥಿಕ, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದ ಯುವಕನನ್ನು ಬಂಧಿಸಿ ಆತನಿಂದ 1,21,04,500/- ರೂಪಾಯಿಗಳು ನಗದು ಹಣ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ‌‌ ವಿ.ಜೆ. ಅವರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.

ಮಧ್ಯಪ್ರದೇಶ ಮೂಲದ ಅಜಯ್ ಕುಮಾರ್ ಜಾಸ್ವಾಲ್ ನನ್ನು ಬಂಧಿಸಿ, ಆತನಿಂದ ರೂಪಾಯಿ 1,21,04,500 ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತನ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿದ್ದ ರೂ. 27,97,582/- ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿರುತ್ತದೆ. ಒಟ್ಟು ರೂ. 1,49,02,082/- ಹಣವನ್ನು ಮತ್ತು ಆರೋಪಿತನು ಅನ್‌ಲೈನ್ ವಂಚನೆಗೆ ಉಪಯೋಗಿಸಿದ ಒಂದು ಮೊಬೈಲ್‌ ಜಪ್ತಿ ಮಾಡಿರುವುದಾಗಿ ಹೇಳಿದರು.

೨೦೨೪ ರ ಸೆಪ್ಟಂಬರ್ 3ರಂದು ರಂದ ಬಳ್ಳಾರಿಯ ಸೈಬರ್ ಕ್ರೈಮ್ ಪೊಲೀಸ್‌ ಠಾಣೆಯಲ್ಲಿ ಹಿಂದುಸ್ತಾನ್ ಕ್ಯಾಲ್ಸಿನೇಟೆಡ್ ಮೆಟಲ್ ಪ್ರವೇಟ್ ಲಿಮಿಟೆಡ್ನ ಸಿಬ್ಬಂದಿಯು ಅಗರ್ ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಕಲ್ಲಿದ್ದಲನ್ನು ಖರೀದಿಸಿ, ಅಗರ್ ವಾಲ್ ಕಂಪನಿಯು ನೀಡಿದ ಬ್ಯಾಂಕ್ ಖಾತೆಗಳಿಗೆ ಹಣವನ್ನು ಅನ್‌ಲೈನ್‌ ಮೂಲಕ ವರ್ಗಾವಣೆ ಮಾಡುತ್ತಿದ್ದರು.

ಈ ಮಾಹಿತಿಯನ್ನು ಸಂಗ್ರಹಿಸಿದ ಆರೋಪಿತನು ಅಗರ್ ವಾಲ್ ಕಂಪನಿಯ ಬ್ಯಾಂಕ್ ಖಾತೆ ಸಂಖ್ಯೆ ಬದಲಾವಣೆ ಆಗಿದೆ ಎಂದು ಯಥಾಪ್ರಕಾರದ ಫೇಕ್ ಇ- ಮೇಲ್ ಐಡಿಯ ಮೂಲಕ ಮದ್ಯಪ್ರದೇಶದ ಇಂಡಸ್ ಲ್ಯಾಂಡ್ ಬ್ಯಾಂಕ್ ಖಾತೆ ಸಂಖ್ಯೆಯನ್ನು ಎಚ್ ಸಿ ಎಂಪಿಎಲ್ ಗೆ ಕಳುಹಿಸಿ ಆನ್‌ಲೈನ್ ಮೂಲಕ ತನ್ನ ಬ್ಯಾಂಕ್ ಖಾತೆಗೆ ಹಣ ರೂ. 2,11,50,224/- ಜಮಾ ಪಡೆದು, ಮೋಸ ಮತ್ತು ವಂಚನೆ ಮಾಡಿದ್ದಾನೆ ಎಂದು ದೂರು ದಾಖಲಾಗಿತ್ತು.

ಬಳ್ಳಾರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಡಿ.ಎಸ್.ಪಿ ಡಾ. ಸಂತೋಷ ಚವ್ಹಾಣ್ ನೇತೃತ್ವದ ತಂಡ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್‌ ರಮಾಕಾಂತ್. ವೈ.ಹೆಚ್. ಮತ್ತು ಸಿಬ್ಬಂದಿಯವರಾದ ಎ.ಎಸ್.ಐ.ಎಂ.ಜಿ.ತಿಪ್ಪೇರುದ್ರಪ್ಪ,ಹನುಮಂತರೆಡ್ಡಿ,.ಯಲ್ಲೇಶಿ,.ವೆಂಕಟೇಶ್ ರವರೊಂದಿಗೆ ಮಧ್ಯಪ್ರದೇಶಕ್ಕೆ ಹೋಗಿ ಆರೋಪಿ ಅಜಯ್ ಕುಮಾರ್ ಜಸ್ವಾಲ್ ನನ್ನು ಸ್ಥಳೀಯ ಪೊಲೀಸರ ನೆರವಿನಿಂದ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು, ತನಿಖೆ ನಡೆಸಿ ಆರೋಪಿತನಿಂದ ಹಿಂದುಸ್ತಾನ್ ಮೆಟಲ್ ಕಂಪನಿಗೆ ವಂಚಿಸಿದ ನಗದು ಹಣ ರೂ. 1,21,04,500/- ಜಪ್ತಿ ಮಾಡಿ, ಆರೋಪಿತನ ಬೇರೆ ಬೇರೆ ಖಾತೆಗಳಲ್ಲಿದ್ದ ರೂ. 27,97,582/- ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿರುತ್ತದೆ. ಒಟ್ಟು ರೂ. 1,49,02,082/- ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಪ್ರಕರಣದ ತನಿಖೆ ಮುಂದುವರೆದಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande