ಇಂದಿನಿಂದ ಸಚಿವ ಡಾ. ಎಸ್.ಜೈಶಂಕರ್ ಎರಡು ದಿನಗಳ ಸ್ವಿಟ್ಜರ್ಲೆಂಡ್ ಪ್ರವಾಸ
ನವದೆಹಲಿ, 12 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಇಂದಿನಿಂದ ಎರಡು ದಿನಗಳ ಸ್ವಿಟ್ಜರ್ಲೆಂಡ್ ಪ್ರವಾಸದಲ್ಲಿದ್ದಾರೆ. ಸೌದಿ ಅರೇಬಿಯಾ, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ಗೆ ಕೈಗೊಂಡಿರುವ ಅವರ ಮೂರು ರಾಷ್ಟ್ರಗಳ ಭೇಟಿಯ ಮೂರನೇ ಮತ್ತು ಅಂತಿಮ ಚರಣ ಇದಾಗಿದೆ
EAM S Jaishankar


ನವದೆಹಲಿ, 12 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಇಂದಿನಿಂದ ಎರಡು ದಿನಗಳ ಸ್ವಿಟ್ಜರ್ಲೆಂಡ್ ಪ್ರವಾಸದಲ್ಲಿದ್ದಾರೆ. ಸೌದಿ ಅರೇಬಿಯಾ, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ಗೆ ಕೈಗೊಂಡಿರುವ ಅವರ ಮೂರು ರಾಷ್ಟ್ರಗಳ ಭೇಟಿಯ ಮೂರನೇ ಮತ್ತು ಅಂತಿಮ ಚರಣ ಇದಾಗಿದೆ.

ಜಿನೀವಾದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರು ಭಾರತವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ.

ಉಭಯ ದೇಶಗಳ ನಡುವಿನ ನಿಕಟ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸಲು ಅವರು ಸ್ವಿಡ್ಜರ್ಲೆಂಡ್ ನ ವಿದೇಶಾಂಗ ಸಚಿವರನ್ನು ಭೇಟಿ ಮಾಡಲಿದ್ದಾರೆ. ಇದಕ್ಕೂ ಮುನ್ನ ಡಾ.ಜೈಶಂಕರ್ ಅವರು ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಅವರನ್ನು ಬರ್ಲಿನ್ ನಲ್ಲಿ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಶುಭಾಶಯ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande