ನಾಳೆ ಭಾರತ-ಫಿಲಿಪೀನ್ಸ್ ಜಂಟಿ ರಕ್ಷಣಾ ಸಹಕಾರ ಸಮಿತಿಯ ೫ನೇ ಸಭೆ
ನವದೆಹಲಿ, 10 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಫಿಲಿಪೀನ್ಸ್‌ನ ಮನಿಲಾದಲ್ಲಿ ನಾಳೆ ಭಾರತ-ಫಿಲಿಪೀನ್ಸ್ ಜಂಟಿ ರಕ್ಷಣಾ ಸಹಕಾರ ಸಮಿತಿಯ ೫ನೇ ಸಭೆ ನಡೆಯಲಿದ್ದು, ಇದರ ಸಹ ಅಧ್ಯಕ್ಷತೆಯನ್ನು ಭಾರತದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ವಹಿಸಲಿದ್ದಾರೆ. ಫಿಲಿಪೀನ್ಸ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲ
India-Philippines Joint Defence Cooperation Committee tomorrow in Manila,


ನವದೆಹಲಿ, 10 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಫಿಲಿಪೀನ್ಸ್‌ನ ಮನಿಲಾದಲ್ಲಿ ನಾಳೆ ಭಾರತ-ಫಿಲಿಪೀನ್ಸ್ ಜಂಟಿ ರಕ್ಷಣಾ ಸಹಕಾರ ಸಮಿತಿಯ ೫ನೇ ಸಭೆ ನಡೆಯಲಿದ್ದು, ಇದರ ಸಹ ಅಧ್ಯಕ್ಷತೆಯನ್ನು ಭಾರತದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ವಹಿಸಲಿದ್ದಾರೆ.

ಫಿಲಿಪೀನ್ಸ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಹಿರಿಯ ಅಧೀನ ಕಾರ್ಯದರ್ಶಿ ಇರಿನಿಯೊ ಕ್ರಝ್ ಎಸ್ಪಿನೊ ಸಹ ಅಧ್ಯಕ್ಷರಾಗಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ ಅರಮನೆಯವರು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತಂತೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಅವರು ಫಿಲಿಪೀನ್ಸ್ ಸರ್ಕಾರದ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಭಾರತ ಹಾಗೂ ಫಿಲಿಪೀನ್ಸ್ ನಡುವೆ ರಕ್ಷಣಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಜಂಟಿ ರಕ್ಷಣಾ ಸಹಕಾರ ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿಯ ಮೊದಲ ಸಭೆ ೨೦೧೨ರಲ್ಲಿ ಮನಿಲಾದಲ್ಲಿ ನಡೆದರೆ, ಎರಡನೇ ಸಭೆ ೨೦೧೭ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಏರ್ಪಟ್ಟು ೭೫ ವರ್ಷಗಳ ಆಚರಣೆ ಸಂದರ್ಭದಲ್ಲಿ ಅರಮನೆ ಅವರ ಈ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande