ಮರಿಯಮ್ಮನಹಳ್ಳಿ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಆದಿಮನಿ ಹುಸೇನ್ ಭಾಷ ಅವರು ತಿಳಿಸಿದ್ದಾರೆ.
ದುರ್ಗಾದಾಸ್ ರಂಗಮಂದಿರದಲ್ಲಿ ವಿನಾಯಕ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿಜಯನಗರ ಇವರ ಸಂಯುಕ್ತಾಶ್ರದಲ್ಲಿ ಹೇಮಲತಾ ಎಸ್. ತಂಡದವರಿಂದ ಸಮೂಹ ನೃತ್ಯ ಹಾಗೂ ಯುವಜನ ಉತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮರಿಯಮ್ಮನಹಳ್ಳಿಯಲ್ಲಿ ನಿರಂತರವಾಗಿ ಒಂದಲ್ಲಾ ಒಂದು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಮತ್ತು ಈ ಊರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಲಾವಿದರನ್ನು ಹೊಂದಿರುವುದರಿಂದ ಮರಿಯಮ್ಮನಹಳ್ಳಿ ಕಲಾವಿದರ ತವರೂರು ಎಂದು ನಾಡಿನಲ್ಲಿ ಉತ್ತಮ ಹೆಸರು ಪಡೆದಿದೆ. ಕಲಾವಿದರ ತವರೂರಲ್ಲಿ ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿರುವುದು ನಮ್ಮ ಪುಣ್ಯ. ಕಲಾವಿದರ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ ಎಂದು ಅವರು ಭರವಸೆ ನೀಡಿದರು.
ಸ್ಥಳೀಯ ಗೀತಾಮೃತ ಧಾನ್ಯಮಂದಿರದ ವ್ಯವಸ್ಥಾಪಕ ಆರ್. ಬಸವರಾಜ ಮಾತನಾಡಿ, ಮನುಷ್ಯ ಉತ್ತಮ ಹವ್ಯಾಸಗಳನ್ನು ಬೆಳಸಿಕೊಂಡು ಉತ್ತಮ ಸಂಸ್ಕಾರ, ಸಂಸ್ಕøತಿಯ ಜೊತೆಗೆ ಕಲೆ, ಸಾಹಿತ್ಯ, ಸಂಗೀತದಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನಗಳಿಂದ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಲಲಿತಕಲಾ ರಂಗದ ಅಧ್ಯಕ್ಷ ಎಚ್. ಮಂಜುನಾಥ, ಪ.ಪಂ. ಮಾಜಿ ಸದಸ್ಯೆ ಪ್ರಿಯಾಂಕ ಬಂಗಾರಿ ಮಂಜುನಾಥ, ವಿನಾಯಕ ಕಲಾ ಟ್ರಸ್ಟ್‍ನ ಅಧ್ಯಕ್ಷೆ ಎಂ. ಅಂಬಿಕಾ, ಸ್ಥಳೀಯ ಮುಖಂಡರಾದ ರೋಗಾಣಿ ಮಂಜುನಾಥ, ಅಕಾರಿ ಗಾಯಿತ್ರಿ, ಧರ್ಮನಾಯ್ಕ, ಕಮಲಾನಾಯ್ಕ, ವೀರೇಶ್ ಬಾಬು ಸೇರಿದಂತೆ ಇತರರು ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿದ್ದರು.
ಹೇಮಲತಾ ಎಸ್. ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮದಲ್ಲಿ ಕೆ. ದುರ್ಗೇಶ್ ಗಾಯನ, ಚಂದ್ರಕಾಂತ್ ಕೀಬೋರ್ಡ್, ಪಿ. ಚಿದಾನಂದ ತಬಲವಾದಕರಾಗಿ ಸಮೂಹ ನೃತ್ಯಕ್ಕೆ ಸಂಗೀತ ನೀಡಿದರು.
ಶಿಕ್ಷಕ ಎಸ್. ಶಂಭುಲಿಂಗ ಸ್ವಾಗತಿಸಿ, ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್