ನ್ಯೂಯಾರ್ಕ, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮುಂದಿನ ತಿಂಗಳು ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿರುವ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಲು 24ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕದ ಪ್ರಜೆಗಳು ನೊಂದಾಯಿಸಿದ್ದಾರೆ.
ಮೋದಿ ಮತ್ತು ಯುಎಸ್ ಪ್ರೋಗ್ರೆಸ್ ಟು ಗೆದರ್‌ಎಂಬ ಕಾರ್ಯಕ್ರಮವು ಸೆ.22 ರಂದು ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ನಡೆಯಲಿದೆ ಅಲ್ಲಿ 15,000 ಪ್ರೇಕ್ಷಕರಿಗೆ ಆಸನ ಸಾಮರ್ಥ್ಯವಿದೆ ಆದರೆ ನಿರೀಕ್ಷೆಗೂ ಹೆಚ್ಚು ಜನರು ಮೋದಿ ಬಾಷಣ ಕೇಳಲು ಹಾತೊರೆಯುತ್ತಿದ್ದಾರೆ.ಈ ಐತಿಹಾಸಿಕ ಸಮಾರಂಭದಲ್ಲಿ ಸಾಧ್ಯವಾದಷ್ಟು ಜನರು ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಕಾರ್ಯಕ್ರಮದ ಪ್ರಮುಖ ಸಂಘಟಕರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ