ಅರ್ಬತ್ (ಸುಡಾನ್), 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಯುದ್ಧ ಪೀಡಿತ ಸುಡಾನ್‌ನಲ್ಲಿ ಭಾರಿ ಮಳೆಯಿಂದಾಗಿ ಅಣೆಕಟ್ಟು ಒಡೆದು ಕನಿಷ್ಠ 60 ಜನರು ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಕೊಚ್ಚಿ ಹೋಗಿದೆ. ನೀರು ಸುಮಾರು 20 ಹಳ್ಳಿಗಳಿಗೆ ನುಗ್ಗಿದ್ದು 50 ಸಾವಿರ ಮನೆಗಳು ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ.
ಅರ್ಬತ್ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕರಾವಳಿ ನಗರವಾದ ಪೋರ್ಟ್ ಸುಡಾನ್‌ನ ಕುಡಿಯುವ ನೀರಿನ ಮುಖ್ಯ ಮೂಲವಾಗಿತ್ತು. ಕೊಚ್ಚಿಕೊಂಡು ಹೋದ ಪ್ರದೇಶವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೆರೆಗೆ ವಿದ್ಯುತ್ ಕಂಬ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 150 ರಿಂದ 200 ಮಂದಿ ಕಾಣೆಯಾಗಿದ್ದಾರೆ. ದುರಂತ ಸಂಭವಿಸುವ ಮೊದಲೇ ಅಣೆಕಟ್ಟು ಕಳಪೆ ಸ್ಥಿತಿಯಲ್ಲಿತ್ತು. ಅಣೆಕಟ್ಟುಗಳು, ರಸ್ತೆಗಳು ಮತ್ತು ಸೇತುವೆಗಳು ಸೇರಿದಂತೆ ಸುಡಾನ್‌ನಲ್ಲಿ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ