ವಯನಾಡ್ ದುರಂತ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ
ಬೆಂಗಳೂರು, 1 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೇರಳದ ವಯನಾಡ್ ನಲ್ಲಿ ನಡೆದ ಗುಡ್ಡ ಕುಸಿತ ದುರಂತವೂ ಅನೇಕ ಬದುಕುಗಳನ್ನ ಕಸಿದುಕೊಂಡಿದೆ. ಜೀವನ ಕಟ್ಟಿಕೊಳ್ಳುವ ಆಸೆಯಿಂದ ಹುಟ್ಟೂರು ಬಿಟ್ಟು ವಯನಾಡಿನಲ್ಲಿ ನೆಲೆಸಿದ್ದ ಮೂವರು ಕನ್ನಡಿಗರು ಉಸಿರು ಚೆಲ್ಲಿದ್ದಾರೆ. ಹಾಗೂ 9 ಮಂದಿ ನಾಪತ್ತೆಯಾಗಿದ್ದಾರೆ. ಇತ್ತ
wayanad-landslides-cm-siddara


ಬೆಂಗಳೂರು, 1 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೇರಳದ ವಯನಾಡ್ ನಲ್ಲಿ ನಡೆದ ಗುಡ್ಡ ಕುಸಿತ ದುರಂತವೂ ಅನೇಕ ಬದುಕುಗಳನ್ನ ಕಸಿದುಕೊಂಡಿದೆ. ಜೀವನ ಕಟ್ಟಿಕೊಳ್ಳುವ ಆಸೆಯಿಂದ ಹುಟ್ಟೂರು ಬಿಟ್ಟು ವಯನಾಡಿನಲ್ಲಿ ನೆಲೆಸಿದ್ದ ಮೂವರು ಕನ್ನಡಿಗರು ಉಸಿರು ಚೆಲ್ಲಿದ್ದಾರೆ. ಹಾಗೂ 9 ಮಂದಿ ನಾಪತ್ತೆಯಾಗಿದ್ದಾರೆ. ಇತ್ತ ಮಕ್ಕಳ ದುರಂತ ಕಥೆ ಇಳಿಯುತ್ತಿದ್ದಂತೆ ಕರ್ನಾಟಕದಲ್ಲಿ ನೆಲೆಸಿರುವ ಹೆತ್ತವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಇನ್ನು ವಯನಾಡಿನ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಹಾಗೂ ನಾಪತ್ತೆಯಾದ ಕನ್ನಡಿಗರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ನಿವಾಸಿ ಮಾದೇವಿ ಅವರು ಮುಖ್ಯಮಂತ್ರಿ ಬಳಿ ತಮ್ಮ ದುಃಖ ಹೇಳುತ್ತ ಕಣ್ಣೀರು ಹಾಕಿದ್ದಾರೆ. ಎಲ್ಲಾ ನೀರು ಹೊತ್ತಕೊಂಡು ಹೊಯ್ತು ಸ್ವಾಮಿ. ನನ್ನ ಮಕ್ಕಳು‌ 9 ಜನ ಹೋದ್ರು. ಕಳೆದ 18 ವರ್ಷಗಳಿಂದ ಕೇರಳದ ವಯನಾಡು ಭಾಗದಲ್ಲಿ ಕೆಲಸ ಮಾಡ್ತಿದ್ರು ಎಂದು ಮುಖ್ಯಮಂತ್ರಿ ಗೆ ದುರಂತದ ಬಗ್ಗೆ ವಿವರಿಸುತ್ತ ಸಂತ್ರಸ್ಥೆ ಮಾದೇವಿ ಕಣ್ಣೀರು ಹಾಕಿದ್ದಾರೆ. ಸದ್ಯ ಈಗ ಮಾದೇವಿ ಅವರು ಕೇರಳದ ನಿರಾಶ್ರಿತ ಕೇಂದ್ರದಲ್ಲಿದ್ದಾರೆ.

ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 300 ಗಡಿಯತ್ತ ಸಾಗಿದೆ. ಈ ಪೈಕಿ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್ 10 ಕನ್ನಡಿಗರು ಬಚಾವ್ ಆಗಿದ್ದಾರೆ. ಹುಟ್ಟೂರು ಬಿಟ್ಟು ಬದುಕು ಕಟ್ಟಿಕೊಳ್ಳಲು ಹೋಗಿದ್ದವರ ದುರಂತ ಅಂತ್ಯದಿಂದ ಕುಟುಂಬದವರು ದಿಗ್ಭ್ರಾಂತರಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande