ಶೂಟಿಂಗ್‌ನಲ್ಲಿ ಇಂದು ಸ್ವಪ್ನಿಲ್ ಕೌಸ್ಲೆ ಭಾರತದ ೩ನೇ ಪದಕಕ್ಕಾಗಿ ಸೆಣಸು
ಪ್ಯಾರಿಸ್, 1 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಹಲವು ಭಾರತೀಯ ಆಟಗಾರರು ಪದಕಗಳಿಗಾಗಿ ಸೆಣಸಲಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಪುರುಷರ ೫೦ ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ಸ್ವಪ್ನಿಲ್ ಕೌಸ್ಲೆ ಭಾರತದ ೩ನೇ ಪದಕಕ್ಕಾಗಿ ಸೆಣಸಲಿದ್ದಾರೆ. ಕೌಸ್ಲೆ ಅವರು ಇ
In the Paris Olympics, Shoote


ಪ್ಯಾರಿಸ್, 1 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಹಲವು ಭಾರತೀಯ ಆಟಗಾರರು ಪದಕಗಳಿಗಾಗಿ ಸೆಣಸಲಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಪುರುಷರ ೫೦ ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ಸ್ವಪ್ನಿಲ್ ಕೌಸ್ಲೆ ಭಾರತದ ೩ನೇ ಪದಕಕ್ಕಾಗಿ ಸೆಣಸಲಿದ್ದಾರೆ. ಕೌಸ್ಲೆ ಅವರು ಇಂದು ಮಧ್ಯಾಹ್ನ ಶೂಟಿಂಗ್ ರೇಂಜ್‌ನಲ್ಲಿ ಸೆಣಸಲಿದ್ದಾರೆ. ಮಹಿಳೆಯರ ೫೦ ಮೀಟರ್ ರೈಫಲ್ ವಿಭಾಗದಲ್ಲಿ ಸಿಪ್ತ್ ಕೌರ್ ಸಮ್ರಾ ಮತ್ತು ಅಂಜುಮ್ ಮೌದ್ಗಿಲ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಅಲ್ಲದೇ ಮಹಿಳೆಯರ ೫೦ ಕೆ.ಜಿ. ಕುಸ್ತಿ ವಿಭಾಗದಲ್ಲಿ ೨ ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಪದಕದ ಸನಿಹದಲ್ಲಿದ್ದಾರೆ. ನಿಖತ್ ಅವರು, ೧೬ನೇ ಸುತ್ತಿನಲ್ಲಿ ಏಷ್ಯನ್ ಚಾಂಪಿಯನ್ ವು ಯು ಅವರನ್ನು ಎದುರಿಸಲಿದ್ದಾರೆ. ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್‌ನ ಮಹಿಳೆಯರ ೭೫ ಕೆ.ಜಿ. ವಿಭಾಗದಲ್ಲಿ ನಾರ್ವೆಯ ಸುನೀವಾ ಹೂಫ್ ಸ್ಟಾಡ್ ವಿರುದ್ಧ ಸುಲಭ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮತ್ತೊಬ್ಬ ಬಾಕ್ಸರ್ ನಿಶಾಂತ್ ದೇವ್ ಪುರುಷರ ೭೧ ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಇಂದು ನಾಕೌಟ್ ಪಂದ್ಯಗಳು ನಡೆಯಲಿದ್ದು, ಪಿ.ವಿ. ಸಿಂಧು, ಲಕ್ಷ್ಯಸೇನ್, ಹೆಚ್.ಎಸ್. ಪ್ರಣೊಯ್ ಅವರು, ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಆಡಲಿದ್ದು, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಜೋಡಿ ಡಬಲ್ಸ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲಿದ್ದಾರೆ. ಹಾಕಿಯಲ್ಲಿ ಭಾರತದ ಹಾಕಿ ತಂಡ ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದ್ದು, ಇಂದು ಬಿ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ಎದುರು ಸೆಣಸಲಿದೆ. ರೇಸ್‌ವಾಕರ್‌ಗಳಾದ ಅರ್ಷದೀಪ್ ಸಿಂಗ್, ವಿಕಾಸ್ ಮತ್ತು ಪರಂಜೀತ್ ಸಿಂಗ್ ಅವರು ಪುರುಷರ ೨೦ ಕಿಲೋಮೀಟರ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನ ಆರಂಭಿಸಲಿದ್ದಾರೆ. ಮಹಿಳೆಯರ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ ಸ್ಪರ್ಧಿಸುವರು. ಬಿಲ್ಲುಗಾರಿಕೆಯಲ್ಲಿ ವಿಶ್ವದ ನಂ. ೧ ಆಟಗಾರ್ತಿ ದೀಪಿಕಾ ಕುಮಾರಿ ಅವರು, ನಿನ್ನೆ ಪ್ರಿಕ್ವಾರ್ಟರ್ ಫೈನಲ್‌ಗೆ ಅರ್ಹತೆ ಸಂಪಾದಿಸಿದ್ದಾರೆ. ಮತ್ತೊಬ್ಬ ಬಿಲ್ಲುಗಾರಿಕೆ ಪಟು ಅರ್ಚರ್ ಬಜನ್ ಕೂಡ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾರತ ಈವರೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ೨ ಕಂಚಿನ ಪದಕಗಳನ್ನು ಜಯಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande