ಬೆಂಗಳೂರು, 29 ಜುಲೈ (ಹಿ.ಸ.) :
ಆ್ಯಂಕರ್ : ಸ್ಯಾಂಡಲ್‌ವುಡ್ ನಟ ವಿನೋದ್ ರಾಜ್ ಅವರು ಇತ್ತೀಚೆಗೆ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾದ ಹಿನ್ನೆಲೆ ರಾಜಿ ಸಂಧಾನಕ್ಕೆ ಹೋಗಿದ್ದಾರೆ ಎಂದು ಚರ್ಚೆ ಶುರುವಾಗಿತ್ತು. ಈ ಬಗ್ಗೆ ಮಾತನಾಡಿ, ದರ್ಶನ್ ಪರವಾಗಿ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದು ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿಯ ಕುರಿತು ವಿನೋದ್ ರಾಜ್ ಮಾತನಾಡಿ, ಕಳೆದ ವಾರ ದರ್ಶನ್‌ರನ್ನು ಕಾಣಲು ಕಾರಾಗೃಹಕ್ಕೆ ಭೇಟಿ ನೀಡಿದ್ದೆ ಅದಾದ ನಂತರ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾದೆ. ರಾಜಿ ಸಂಧಾನಕ್ಕೆ ಹೋಗಿದ್ದೀನಿ ಅಂತೆಲ್ಲಾ ಸುದ್ದಿಯಾಯಿತು. ಖಂಡಿತಾ ಇಲ್ಲ. ದರ್ಶನ್ ಒಬ್ಬ ಕಲಾವಿದರು ಎನ್ನುವ ಪ್ರೀತಿಯಿಂದ ನೋಡಿ ಭೇಟಿಯಾಗಿ ಬಂದಿದ್ದೇನೆ ಅಷ್ಟೇ ಎಂದರು.
ಆದರೆ ರೇಣುಕಾಸ್ವಾಮಿ ಪತ್ನಿ ಗರ್ಭಿಣಿ ಅನ್ನೋ ಕಾರಣಕ್ಕೆ ಹುಟ್ಟೋ ಮಗುವಿಗೆ ಏನಾದರೋ ಒಳ್ಳೆಯದು ಮಾಡೋಕೆ ಆಗುತ್ತಾ ಅನ್ನುವ ದೃಷ್ಟಿಯಿಂದ ಹೋಗಿ ಬಂದಿದ್ದೇನೆ ಅಷ್ಟೇ. ಅದಕ್ಕೆ ಕೈಲಾದ ಕಾಣಿಕೆ ಕೊಟ್ಟು ಬಂದೆ. ಅದು ಬಿಟ್ಟು ಯಾವುದೇ ರಾಜಿ ಸಂಧಾನ ಮಾಡಲು ನಾನು ಹೋಗಿರಲಿಲ್ಲ. ಅದು ನನಗೆ ಬೇಕಾಗೂ ಇಲ್ಲ ಎಂದು ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ