ನವದೆಹಲಿ, 28 ಜುಲೈ (ಹಿ.ಸ.):
ಆ್ಯಂಕರ್ : ದೇಶದ ಅಗ್ರ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ, 4 ಲಕ್ಷಕ್ಕೂ ಹೆಚ್ಚು ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.
ಇಗ್ನಿಷನ್ ಕಾಯಿಲ್‌ಗೆ ಸಂಪರ್ಕಗೊಂಡಿರುವ ದೋಷಯುಕ್ತ ಹೈ-ಟೆನ್ಶನ್ ಕಾರ್ಡ್ ಪತ್ತೆಯಾದ ಬಳಿಕ ಈ ನಿರ್ಧಾರವನ್ನು ಸುಜುಕಿ ಇಂಡಿಯಾ ಮಾಡಿದೆ. ಒಟ್ಟು 3,88,411 ಸ್ಕೂಟರ್‌ಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕಂಪನಿ ತಿಳಿಸಿದೆ.
2022ರ ಏಪ್ರಿಲ್ 30 ಹಾಗೂ 2022ರ ಡಿಸೆಂಬರ್ 3 ರ ನಡುವೆ ಉತ್ಪಾದನೆ ಮಾಡಲಾದ, ಮಾರುಕಟ್ಟೆಯಲ್ಲಿ ಹಾಟ್ ಸೆಲ್ಲಿಂಗ್‌ನಲ್ಲಿರುವ ಆಕ್ಸೆಸ್ 125, ಅವೆನಿಸ್ 125 ಹಾಗೂ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಸ್ಕೂಟರ್-ಬೈಕ್‌ಗಳನ್ನು ಹಿಂಪಡೆಯುವ ಲಿಸ್ಟ್‌ನಲ್ಲಿ ಇರಿಸಲಾಗಿದೆ.ಬೈಕ್ ವಿಭಾಗಕ್ಕೆ ಬಂದಾಗ, ಟೆಕ್-ಲೋಡೆಡ್ ವಿ-ಸ್ಟ್ರೋಮ್ 800 ಡಿಇ ಕೂಡ ಇದೇ ಸಮಸ್ಯೆಗೆ ಈಡಾಗಿದೆ. ಹಿಂದಿನ ಟೈರ್ ವಿಚಾರದಲ್ಲಿ ಸಮಸ್ಯೆ ಇರೋದನ್ನು ಕಂಪನಿ ಕಂಡಿದೆ. ಬ್ರ್ಯಾಂಡ್ ಹಂಚಿಕೊಂಡ ವಿವರಗಳ ಪ್ರಕಾರ, ಟೈರ್ ಟ್ರೆಡ್‌ನ ಕೆಲವು ಭಾಗವು ಬೇರ್ಪಟ್ಟು ಅದರಲ್ಲಿ ಬಿರುಕುಗಳನ್ನು ಉಂಟುಮಾಡಬಹುದು.
ಕಂಪನಿ ಹಿಂಪಡೆಯಲಿರುವ ಲಿಸ್ಟ್‌ನಲ್ಲಿ ನೀವು ಖರೀದಿ ಮಾಡಿದ ಬೈಕ್ ಅಥವಾ ಸ್ಕೂಟರ್‌ಗಳು ಕೂಡ ಇರಬಹುದು. ಅವುಗಳನ್ನು ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಪರೀಕ್ಷೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಇಲ್ಲಿ ವಾಹನದ ವಿಐಎನ್ ಹಾಕಿ ನಿಮ್ಮ ಬೈಕ್‌ನಲ್ಲೂ ಬದಲಾವಣೆಯ ಅವಶ್ಯಕತೆ ಇದೆಯೇ ಇಲ್ಲವೇ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ.
ಸುಜುಕಿ ಇಂಡಿಯಾ, ಭಾರತದಲ್ಲಿ ಸ್ಕೂಟರ್ ಮತ್ತು ಬೈಕ್ ವಿಭಾಗಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದೆ. ಈ ಪಟ್ಟಿಯಲ್ಲಿ ಸೂಪರ್ ಹಿಟ್ ಆಗಿರುವ ಸುಜುಕಿ ಆಕ್ಸೆಸ್ 125, ಸುಜುಕಿ ಬರ್ಗ್‌ಮ್ಯಾನ್, ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125, ಸುಜುಕಿ ಕಟಾನಾ, ಸುಜುಕಿ ಜಿಕ್ಸರ್ ಎಸ್‌ಎಫ್, ಸುಜುಕಿ ಜಿಕ್ಸರ್ 250, ಸುಜುಕಿ ವಿ-ಸ್ಟ್ರೋಮ್ ಎಸ್‌ಎಕ್ಸ್, ಸುಜುಕಿ ಜಿಎಸ್‌ಎಕ್ಸ್-ಆರ್1000ಆರ್ ಸೇರಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ