ಇಂದು ಅರ್ಜುನ್​ಗಾಗಿ ಮುಳುಗು ತಜ್ಞರಿಂದ ಹುಡುಕಾಟ
ಕಾರವಾರ, 27 ಜುಲೈ (ಹಿ.ಸ.)​: ಆ್ಯಂಕರ್ ​: ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನವಾಗಿದೆ. ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನದಿಯ ದಡದಲ್ಲಿ ಈಗಾಗಲೇ ಹುಡುಕಾಟ ಮುಗಿದಿದ್ದು, ಲಾರಿ ಮತ್ತು ಚಾಲಕ ಅರ್ಜುನ್​ ನದಿಯೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ಗೋಕ
shiruru-truck-driver-arjun-case-poclain-returned-afte


ಕಾರವಾರ, 27 ಜುಲೈ (ಹಿ.ಸ.)​:

ಆ್ಯಂಕರ್ ​: ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನವಾಗಿದೆ. ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನದಿಯ ದಡದಲ್ಲಿ ಈಗಾಗಲೇ ಹುಡುಕಾಟ ಮುಗಿದಿದ್ದು, ಲಾರಿ ಮತ್ತು ಚಾಲಕ ಅರ್ಜುನ್​ ನದಿಯೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ.

ಅತ್ತ ಗೋಕಾಕ್ ನಿಂದ ಬಂದ ಪೋಕ್ಲೈನ್ ತನ್ನ ಕೆಲಸ ಮುಗಿಸಿದ್ದು, ವಾಪಾಸ್ ಆಗುತ್ತಿದೆ.

ಇಂದು ಅರ್ಜುನ್​ಗಾಗಿ ಮುಳುಗು ತಜ್ಞರಿಂದ ಹುಡುಕಾಟ ನಡೆಯಲಿದೆ.

ಈಶ್ವರ್ ಮಲ್ಪೆ ತಂಡ ಇಂದು ಶಿರೂರಿಗೆ ಬರಲಿದ್ದು, ಅರ್ಜುನ್​​ಗಾಗಿ ಹುಡುಕಾಡಲಿದ್ದಾರೆ. ಜಿಲ್ಲಾಡಳಿತದ ಮನವಿ ಮೇರೆಗೆ ಮುಳುಗು ತಜ್ಞರ ತಂಡ ಶಿರೂರಿಗೆ ಆಗಮಿಸಲಿದ್ದಾರೆ.

ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಿರುವ ಹಿನ್ನಲೆಯಲ್ಲಿ, ನೀರಿನೊಳಗೆ ಹೋಗಲು ನೌಕಾದಳದ ಮುಳುಗು ತಜ್ಞರು ಹಿಂದೇಟು ಹಾಕಿದ್ದಾರೆ. ಈ ವೇಳೆ ಶಾಸಕ ಸತೀಶ್ ಸೈಲ್ ಸ್ಥಳೀಯ ಮೀನುಗಾರ ಹಾಗೂ ಈಶ್ವರ್ ಮಲ್ಪೆ ಸಹಾಯ ಕೇಳಿದ್ದಾರೆ.ಇಂದು ಅರ್ಜುನ್​ ಮತ್ತು ಲಾರಿ ಪತ್ತೆಯಾದರೆ ನದಿಯ ಕೆಳಗೆ ಸುಮಾರು 20 ಅಡಿ ಆಳದಲ್ಲಿರುವ ಲಾರಿ ಮೇಲಕ್ಕೆ ಎತ್ತಲು ಪ್ರಯತ್ನ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande