ರೈಲು ಬರುತ್ತಿದ್ದಾಗಲೇ ಕುಸಿದ ಗುಡ್ಡ, ಹಳಿಯಿಂದ ಜಾರಿದ ರೈಲು
ಹಾಸನ, 26ಜುಲೈ (ಹಿ.ಸ.) : ಆ್ಯಂಕರ್ : ಇಲ್ಲಿನ ಶಾಂತಿಗ್ರಾಮದ ಬಳಿ ಗೂಡ್ಸ್ ರೈಲು ಹಳಿ ತಪ್ಪಿ ಅನಾಹುತ ಸಂಭವಿಸಿದೆ. ರೈಲು ಚಲಿಸುತ್ತಿರುವಾಗಲೇ ಹಳಿ ಮೇಲೆ ಗುಡ್ಡ ಕುಸಿದಿದ್ದರಿಂದ ರೈಲು ಹಳಿಯಿಂದ ಜಾರಿದೆ. ಇಂದು ಮುಂಜಾನೆ 5.45ರ ಸುಮಾರಿಗೆ ಟ್ರ್ಯಾಕ್ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ರೈಲುಗಳ ಸಂಚಾರ
goods-train-derailed-near-hassan-karnataka/


ಹಾಸನ, 26ಜುಲೈ (ಹಿ.ಸ.) :

ಆ್ಯಂಕರ್ : ಇಲ್ಲಿನ ಶಾಂತಿಗ್ರಾಮದ ಬಳಿ ಗೂಡ್ಸ್ ರೈಲು ಹಳಿ ತಪ್ಪಿ ಅನಾಹುತ ಸಂಭವಿಸಿದೆ. ರೈಲು ಚಲಿಸುತ್ತಿರುವಾಗಲೇ ಹಳಿ ಮೇಲೆ ಗುಡ್ಡ ಕುಸಿದಿದ್ದರಿಂದ ರೈಲು ಹಳಿಯಿಂದ ಜಾರಿದೆ.

ಇಂದು ಮುಂಜಾನೆ 5.45ರ ಸುಮಾರಿಗೆ ಟ್ರ್ಯಾಕ್ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಯಾವುದೇ ಸಾವು, ನೋವು ಸಂಭವಿಸಿಲ್ಲ.

ಕೊನೆಗೆ ರೈಲ್ವೇ ಸಿಬ್ಬಂದಿ ಟ್ರ್ಯಾಕ್ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ.

ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಹಾಸನ ಬೆಂಗಳೂರು, ಬೆಂಗಳೂರು-ಹಾಸನ ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆ ಆಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande