ಮೇಲ್ಛಾವಣಿ ಕುಸಿತ ; ಗಾಯಾಳು ಮಹಿಳೆ ನಿಧನ
ಬಳ್ಳಾರಿ, 27 ಜುಲೈ (ಹಿಂ.ಸ.) ಆ್ಯಂಕರ್: ಜುಲೈ 18ರ ಮಧ್ಯಾಹ್ನ ಮೊಹರಂ ಹಬ್ಬದ ಆಚರಣೆಯಲ್ಲಿ ರಸ್ತೆ ಪಕ್ಕದಲ್ಲಿದ್ದ ಕಬ್ಬಿಣದ ತಗಡಿನ ಶೆಡ್‍ನ ಮೇಲೆ ಜನರು ಕೂತಿದ್ದಾಗ ತೂಕ ಹೆಚ್ಚಾಗಿ ಮೇಲ್ಛಾವಣಿ ಕುಸಿದ ಪ್ರಕರಣದಲ್ಲಿ ತೀವ್ರವಾಗಿ ಬೆನ್ನುಮೂಳೆ ಮತ್ತು ಕುತ್ತಿಗೆ ಹಾನಿಯಾಗಿದ್ದ ಮಹಿಳೆಯು ಜುಲೈ 23ರ ಮಂಗಳವಾರ
ಬಳ್ಳಾರಿ ಮೊಹರಂನಲ್ಲಿ ಮೇಲ್ಛಾವಣಿ ಕುಸಿತ ; ಗಾಯಾಳು ಮಹಿಳೆ ನಿಧನ


ಬಳ್ಳಾರಿ ಮೊಹರಂನಲ್ಲಿ ಮೇಲ್ಛಾವಣಿ ಕುಸಿತ ; ಗಾಯಾಳು ಮಹಿಳೆ ನಿಧನ


ಬಳ್ಳಾರಿ, 27 ಜುಲೈ (ಹಿಂ.ಸ.)

ಆ್ಯಂಕರ್: ಜುಲೈ 18ರ ಮಧ್ಯಾಹ್ನ ಮೊಹರಂ ಹಬ್ಬದ ಆಚರಣೆಯಲ್ಲಿ ರಸ್ತೆ ಪಕ್ಕದಲ್ಲಿದ್ದ ಕಬ್ಬಿಣದ ತಗಡಿನ ಶೆಡ್‍ನ ಮೇಲೆ ಜನರು ಕೂತಿದ್ದಾಗ ತೂಕ ಹೆಚ್ಚಾಗಿ ಮೇಲ್ಛಾವಣಿ ಕುಸಿದ ಪ್ರಕರಣದಲ್ಲಿ ತೀವ್ರವಾಗಿ ಬೆನ್ನುಮೂಳೆ ಮತ್ತು ಕುತ್ತಿಗೆ ಹಾನಿಯಾಗಿದ್ದ ಮಹಿಳೆಯು ಜುಲೈ 23ರ ಮಂಗಳವಾರ ರಾತ್ರಿ 8.45ಕ್ಕೆ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತಳು ಬಂಡಿಹಟ್ಟಿ ನಿವಾಸಿ ಕೆ. ಲಕ್ಷ್ಮಿ (40).

ಪ್ರತೀ ವರ್ಷದಂತೆ ಈ ವರ್ಷವೂ ಕೆ. ಲಕ್ಷ್ಮಿಯು ಊರಲ್ಲಿ ನಡೆಯುವ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು, ಸಾರ್ವಜನಿಕರ ಜೊತೆ ಉತ್ಸವದಲ್ಲಿ ಉಲ್ಲಾಸದಿಂದ ಪಾಲ್ಗೊಂಡಿದ್ದರು. ಆದರೆ, ಲಕ್ಷ್ಮಿ ಅವರು ನಿಂತಿದ್ದ ಸ್ಥಳದಲ್ಲಿದ್ದ ತಗಡಿನ ಶೆಡ್ ಮೇಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೂತಿದ್ದ ಕಾರಣ, ಛಾವಣಿ ಏಕಾಏಕಿ ಕುಸಿದುಬಿದ್ದ ಕಾರಣ ಕೆಳಗಡೆ ನಿಂತಿದ್ದ ಕೆ. ಲಕ್ಷ್ಮಿ ಅವರ ಕತ್ತು ಮತ್ತು ಬೆನ್ನುಮೂಳೆ ತೀವ್ರವಾಗಿ ಹಾನಿಯಾಗಿತ್ತು.

ತೀವ್ರವಾಗಿ ಗಾಯಗೊಂಡಿದ್ದ ಕೆ. ಲಕ್ಷ್ಮಿಯನ್ನು ತಕ್ಷಣವೇ ವಿಮ್ಸ್‍ನ - ಟ್ರಾಮಾಕೇರ್ ಸೆಂಟರ್‍ಗೆ ದಾಖಲಿಸಲಾಯಿತು. ಕುಟುಂಬದ ಸದಸ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‍ಗೆ ಜುಲೈ 20 ರಂದು ಕರೆದುಕೊಂಡು ಹೋದಾಗ ಚಿಕಿತ್ಸೆಯ ಭರವಸೆ ಸಿಗದ ಕಾರಣ, ಸಂಜಯಗಾಂಧಿ ಇನ್ಸಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಆಸ್ಪತ್ರೆಗೆ ಶುಕ್ರವಾರ ರಾತ್ರಿ ಒಳ ರೋಗಿಯಾಗಿ ದಾಖಲಿಸಲಾಯಿತು.

ಸಂಜಯಗಾಂಧಿ ಇನ್ಸಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಆಸ್ಪತ್ರೆಯಲ್ಲಿ ಎಂಆರ್‍ಐ ಸ್ಕ್ಯಾನ್, ಸಿಟಿ ಸ್ಕ್ಯಾನ್, ಎಕ್ಸರೇ ಇನ್ನಿತರೆ ಪರೀಕ್ಷೆಗಳಿಗೆ ಗಾಯಾಳುವನ್ನು ಒಳಪಡಿಸಿದ ನಂತರ, ಕೆ. ಲಕ್ಷ್ಮಿ ಅವರು ತೀವ್ರವಾಗಿ ಗಾಯಗೊಂಡಿರುವ ವಿಚಾರವನ್ನು ವೈದ್ಯರು, ಆಕೆಯ ಕುಟುಂಬದ ಸದಸ್ಯರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಕುಟುಂಬದ ಸದಸ್ಯರು, ಕೆ. ಲಕ್ಷ್ಮಿಯನ್ನು ಶನಿವಾರ ಮನೆಗೆ ಕರೆದುಕೊಂಡು ಬಂದಿದ್ದು, ಜುಲೈ 21 ಮತ್ತು 22 ರಂದು ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಿದ್ದು, 23ರ ರಾತ್ರಿ ಏಕಾಏಕಿ ಆಕೆಯ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಟ್ರಾಮಾಕೇರ್ ಸೆಂಟರ್‍ಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದಾರೆ.

ಟ್ರಾಮಾಕೇರ್‍ನ ವೈದ್ಯರು, ಕೆ. ಲಕ್ಷ್ಮಿಯ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕೆ. ಲಕ್ಷ್ಮಿಗೆ ಒಬ್ಬ ಮಗ ಮತ್ತು ಮಗಳಿದ್ದು, ಪತಿ ಎನ್.ಕೆ.ಎಚ್. ಲಕ್ಷ್ಮೀಪತಿ ಅವರು ಬಂಡಿಹಟ್ಟಿ ಮನೆಯಲ್ಲಿಯೇ ಚಿಕ್ಕದಾದ ಅಂಗಡಿಯನ್ನು ಹೊಂದಿದ್ದಾರೆ.

ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande