ಎಐ ಸಾಮರ್ಥ್ಯದ 'ಸರ್ಚ್​ ಜಿಪಿಟಿ' ತಯಾರಿಸಿದ ಓಪನ್​ ಎಐ
ಸ್ಯಾನ್ ಫ್ರಾನ್ಸಿಸ್ಕೋ, 27 ಜುಲೈ (ಹಿ.ಸ.)​: ಆ್ಯಂಕರ್ ​: ಸದ್ಯ ಗೂಗಲ್ ಪ್ರಾಬಲ್ಯ ಹೊಂದಿರುವ ಸರ್ಚ್​ ಎಂಜಿನ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಚಾಟ್ ಜಿಪಿಟಿ ತಯಾರಕ ಕಂಪನಿ ಓಪನ್ ಎಐ ಘೋಷಿಸಿದೆ. ಇಂಟರ್​ನೆಟ್​ನಲ್ಲಿ ನೈಜ ಸಮಯದಲ್ಲಿ ಮಾಹಿತಿಗಳನ್ನು ಹುಡುಕಾಡಲು ನೆರವಾಗುವ ಎಐ ಸಾಮರ್ಥ್ಯದ ಸರ್ಚ್ ಜಿಪ
OpenAI Builds Search Engine


ಸ್ಯಾನ್ ಫ್ರಾನ್ಸಿಸ್ಕೋ, 27 ಜುಲೈ (ಹಿ.ಸ.)​:

ಆ್ಯಂಕರ್ ​: ಸದ್ಯ ಗೂಗಲ್ ಪ್ರಾಬಲ್ಯ ಹೊಂದಿರುವ ಸರ್ಚ್​ ಎಂಜಿನ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಚಾಟ್ ಜಿಪಿಟಿ ತಯಾರಕ ಕಂಪನಿ ಓಪನ್ ಎಐ ಘೋಷಿಸಿದೆ.

ಇಂಟರ್​ನೆಟ್​ನಲ್ಲಿ ನೈಜ ಸಮಯದಲ್ಲಿ ಮಾಹಿತಿಗಳನ್ನು ಹುಡುಕಾಡಲು ನೆರವಾಗುವ ಎಐ ಸಾಮರ್ಥ್ಯದ ಸರ್ಚ್ ಜಿಪಿಟಿ ಹೆಸರಿನ ಸರ್ಚ್​ ಎಂಜಿನ್ ಅನ್ನು ಲಾಂಚ್ ಮಾಡುವುದಾಗಿ ಅದು ಹೇಳಿದೆ.

ಸ್ಪಷ್ಟವಾದ ಮತ್ತು ಸಂಬಂಧಿತ ಮೂಲಗಳಿಂದ ವೇಗವಾಗಿ ಹಾಗೂ ಸಮಯೋಚಿತವಾಗಿ ಹುಡುಕಾಟದ ಫಲಿತಾಂಶಗಳನ್ನು ನೀಡಬಲ್ಲ ಎಐ ಸಾಮರ್ಥ್ಯದ ಸರ್ಚ್ ಜಿಪಿಟಿಯ ತಾತ್ಕಾಲಿಕ ಮೂಲಮಾದರಿಯನ್ನು ಪ್ರಸ್ತುತ ಪರೀಕ್ಷಿಸುತ್ತಿರುವುದಾಗಿ ಸ್ಯಾಮ್ ಆಲ್ಟ್​ಮನ್ ನೇತೃತ್ವದ ಚಾಟ್​ ಜಿಪಿಟಿ ಹೇಳಿದೆ.

ಸರ್ಚ್ ಜಿಪಿಟಿಯನ್ನು ಅದರ ಎಐ ಮಾದರಿಗಳ ಸಾಮರ್ಥ್ಯವನ್ನು ಮತ್ತು ಇಂಟರ್​ನೆಟ್​ನಲ್ಲಿನ ಮಾಹಿತಿಗಳನ್ನು ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಬಳಕೆದಾರರಿಗೆ ಸ್ಪಷ್ಟ ಮತ್ತು ಸಂಬಂಧಿತ ಮೂಲಗಳಿಂದ ವೇಗದ ಮತ್ತು ಸಮಯೋಚಿತ ಉತ್ತರಗಳನ್ನು ನೀಡುತ್ತದೆ. ಇದು ಹೇಗೆ ಕೆಲಸ ಮಾಡಲಿದೆ ಎಂಬುದರ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲು ಆರಂಭದಲ್ಲಿ ಇದನ್ನು ಸಣ್ಣ ಸಂಖ್ಯೆಯ ಬಳಕೆದಾರರು ಮತ್ತು ಪಬ್ಲಿಷರ್​ಗಳಿಗೆ ಬಳಸಲು ಬಿಡುಗಡೆ ಮಾಡುತ್ತಿರುವುದಾಗಿ ಓಪನ್ ಎಐ ಹೇಳಿದೆ.

ಈ ಮೂಲಮಾದರಿ ತಾತ್ಕಾಲಿಕವಾಗಿದ್ದರೂ, ಭವಿಷ್ಯದಲ್ಲಿ ಅತ್ಯುತ್ತಮವಾದ ಎಲ್ಲ ವೈಶಿಷ್ಟ್ಯಗಳನ್ನು ನೇರವಾಗಿ ಚಾಟ್ ಜಿಪಿಟಿಗೆ ಸಂಯೋಜಿಸಲು ನಾವು ಯೋಜಿಸಿದ್ದೇವೆ ಎಂದು ಕಂಪನಿ ಹೇಳಿದೆ. ಸರ್ಚ್​ ಮಾಡುವಾಗ ಪ್ರಮುಖವಾಗಿ ಉಲ್ಲೇಖಿಸುವ ಮತ್ತು ಲಿಂಕ್ ಮಾಡುವ ಮೂಲಕ ಬಳಕೆದಾರರು ಪಬ್ಲಿಷರ್​ಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವಂತೆ ಸರ್ಚ್ ಜಿಪಿಟಿಯನ್ನು ವಿನ್ಯಾಸಗೊಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande