ಸೋಯಾ ಹಾಲು : ದನದ ಹಾಲಿನಷ್ಟೇ ಆರೋಗ್ಯಕಾರಿ
ಬೆಂಗಳೂರು, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮನುಷ್ಯನ ಆರೋಗ್ಯಕ್ಕೆ ಹಾಲು ತುಂಬಾನೇ ಒಳ್ಳೆಯದು ಎಂದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಇದೇ ಕಾರಣಕ್ಕೆ ಹಾಲನ್ನು ಪರಿಶುದ್ಧ ಅಮೃತ ಎಂದು ಕರೆಯುವುದು.ಇಂದಿನ ದಿನಗಳಲ್ಲಿ ಹಸುವಿನ ಹಾಲಿಗೆ ಪರ್ಯಾಯವಾಗಿ ಅನೇಕ ಹಾಲುಗಳಿವೆ. ಸೋಯಾ ಹಾಲು ಹಸುವಿನ ಹಾಲಿನ
:


ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮನುಷ್ಯನ ಆರೋಗ್ಯಕ್ಕೆ ಹಾಲು ತುಂಬಾನೇ ಒಳ್ಳೆಯದು ಎಂದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಇದೇ ಕಾರಣಕ್ಕೆ ಹಾಲನ್ನು ಪರಿಶುದ್ಧ ಅಮೃತ ಎಂದು ಕರೆಯುವುದು.ಇಂದಿನ ದಿನಗಳಲ್ಲಿ ಹಸುವಿನ ಹಾಲಿಗೆ ಪರ್ಯಾಯವಾಗಿ ಅನೇಕ ಹಾಲುಗಳಿವೆ. ಸೋಯಾ ಹಾಲು ಹಸುವಿನ ಹಾಲಿನಷ್ಟೇ ಆರೋಗ್ಯಕರವಾಗಿದ್ದು, ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುಲು ನೆರವಿಗೆ ಬರುತ್ತದೆ. ಸೋಯಾ ಹಾಲಿನ ಬಗ್ಗೆ ನೀವು ಕೇಳಿರಬಹುದು. ಇದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದಲ್ಲದೆ ಇದರಲ್ಲಿ ದೇಹಕ್ಕೆ ಅಗತ್ಯವಿರುವ ಪ್ರಮುಖ ಅಮೈನೋ ಆಮ್ಲವಿದೆ.

ಸೋಯಾ ಹಾಲಿನಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಇದ್ದು ಪ್ರೋಟೀನ್ ಅಧಿಕವಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುತ್ತದೆ. ಸೋಯಾ ಹಾಲಿನಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಸ್ಯಾಚುರೇಟೆಡ್ ಕೊಬ್ಬುಗಳು ಸಹ ತುಂಬಾ ಕಡಿಮೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪರದಾಡುತ್ತಿರುವವರಿಗೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವವರಿಗೆ ಇದು ಅತ್ಯುತ್ತಮ ಎಂದೇ ಹೇಳಬಹುದು. ಎಮ್ಮೆ ಹಾಲಿನಷ್ಟೇ ಪೋಷಕಾಂಶಗಳನ್ನು ಒಳ ಗೊಂಡಿದೆ ಈ ಸೋಯಾ ಹಾಲು!

ತೂಕ ಇಳಿಕೆಗೆ ಸಹಕಾರಿ

ಸಾಮಾನ್ಯವಾಗಿ ಋತುಬಂಧದ ಸಮಯದಲ್ಲಿ ಅನೇಕ ಮಹಿಳೆಯರು ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಾರೆ. ಅಂತವರು ಸೋಯಾ ಹಾಲನ್ನು ಕುಡಿಯುವುದರಿಂದ ಸಮಸ್ಯೆಯನ್ನು ತಡೆಯಬಹುದು. ಅಲ್ಲದೆ ಇದರಲ್ಲಿ ಕೊಬ್ಬು ಕಡಿಮೆ ಇದ್ದು ಪ್ರೋಟೀನ್ ಮತ್ತು ಫೈಬರ್ ಅಂಶದಿಂದ ಸಮೃದ್ಧವಾಗಿರುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರವಾಗಿದೆ. ಸೋಯಾ ಹಾಲಿನಲ್ಲಿ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಗಳಿರುವುದರಿಂದ ಕೂದಲು ಆರೋಗ್ಯವಾಗಿ ಬೆಳೆಯಲು ಇದು ತುಂಬಾ ಉಪಯುಕ್ತವಾಗಿದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಸೋಯಾ ಹಾಲು ಚರ್ಮ ಯಾವಾಗಲೂ ತೇವಾಂಶದಿಂದ ಕೂಡಿರಲು ಸಹಾಯ ಮಾಡುವುದಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಕ್ಯಾಲ್ಸಿಯಂ ಅಂಶ ಅಧಿಕವಾಗಿರುವ ಸೋಯಾ ಹಾಲಿನ ನಿಯಮಿತ ಸೇವನೆಯು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ಪ್ರತಿದಿನ ಈ ಹಾಲನ್ನು ಕುಡಿದರೆ, ಅದು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಅದಲ್ಲದೆ ಇದರಲ್ಲಿ ಫೈಬರ್ ಅಂಶ ಇರುವುದರಿಂದ ಇದು ರಕ್ತಹೀನತೆ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಸೋಯಾ ಹಾಲಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೆ, ಸೋಯಾ ಹಾಲು ಕುಡಿಯುವುದರಿಂದ ಮಧುಮೇಹ ರೋಗಿಗಳಿಗೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಈ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ಇರುವುದರಿಂದ ಪ್ರತಿದಿನ ಇದನ್ನು ಕುಡಿಯುವುದರಿಂದ ದೇಹದ ದೌರ್ಬಲ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ದೇಹವು ಶಕ್ತಿಯುತವಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande