ಗುರು ಪೂರ್ಣಿಮಾ ಹಿನ್ನಲೆ - ಹೆಚ್ಚಿನ ಆದಾಯ ಕಂಡ ಶಿರಡಿ ಸಾಯಿಬಾಬಾ ಮಂದಿರ
ನವದೆಹಲಿ, 26 ಜುಲೈ (ಹಿ.ಸ.) : ಆ್ಯಂಕರ್ : ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಮೂರು ದಿನಗಳ ಗುರು ಪೂರ್ಣಿಮಾ ಉತ್ಸವದಲ್ಲಿ 6 ಕೋಟಿ ರೂಪಾಯಿ ಹುಂಡಿ ಆದಾಯ ಹರಿದುಬಂದಿದೆ. ಗುರು ಪೂರ್ಣಿಮೆ ನಿಮಿತ್ತ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ರೂ. 2 ಕೋಟಿ 50 ಲಕ್ಷಗಳು.. ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಆನ್‌
guru purnima festival effect: Shirdi Sai baba Temple


ನವದೆಹಲಿ, 26 ಜುಲೈ (ಹಿ.ಸ.) :

ಆ್ಯಂಕರ್ : ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಮೂರು ದಿನಗಳ ಗುರು ಪೂರ್ಣಿಮಾ ಉತ್ಸವದಲ್ಲಿ 6 ಕೋಟಿ ರೂಪಾಯಿ ಹುಂಡಿ ಆದಾಯ ಹರಿದುಬಂದಿದೆ. ಗುರು ಪೂರ್ಣಿಮೆ ನಿಮಿತ್ತ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ರೂ. 2 ಕೋಟಿ 50 ಲಕ್ಷಗಳು.. ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಆನ್‌ಲೈನ್‌ನಲ್ಲಿ 1 ಕೋಟಿಗೂ ಹೆಚ್ಚು ದೇಣಿಗೆಗಳು ಬಂದಿವೆ. ಈ ಬಗ್ಗೆ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಅಧಿಕಾರಿ ವರ್ಗ ಮಾಹತಿ ಹಂಚಿಕೊಂಡಿದೆ.

ತಿರುಮಲ ತಿರುಪತಿ ಕ್ಷೇತ್ರವು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಅದಾದ ಮೇಲೆ ಮಹಾರಾಷ್ಟ್ರದ ಶಿರಡಿ ಕ್ಷೇತ್ರ ಶ್ರೀಮಂತವಾಗುತ್ತಿದೆ. ಆದರೆ ಈಗ ತಿರುಮಲದ ಶ್ರೀವಾರಿಯ ಆದಾಯಕ್ಕೆ ಶಿರಡಿ ಸಾಯಿಬಾಬಾ ದೇವಸ್ಥಾನ ಪೈಪೋಟಿ ನೀಡುತ್ತಿದೆ. ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಮಿ ಎಂದು ಆಚರಿಸಲಾಗುತ್ತದೆ.

ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಇದೇ 20ರಂದು ಆರಂಭವಾದ ಗುರು ಪೌರ್ಣಮಿ ಮಹೋತ್ಸವು ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಭಕ್ತರು ಸಾಯಿಬಾಬಾಗೆ ವಿವಿಧ ದೇಣಿಗೆ ನೀಡಿದ್ದು, ಶಿರಡಿ ಸಾಯಿಬಾಬಾ 6 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹಿಸಿದ್ದಾರೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಸಿಇಒ ಗೋರಕ್ಷಾ ಗಾಡಿಲ್ಕರ್ ಬಹಿರಂಗಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande