ಲಂಡನ್, 26 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹೋತ್ತರ ಕಾರ್ಯಕ್ರಮ ಮದುವೆ ನಂತರದ ಕಾರ್ಯಕ್ರಮಗಳನ್ನು ಮೀರಿಸುವಂತೆ ನಡೆಯುವ ಸಾಧ್ಯತೆ ಇದೆ. ಲಂಡನ್ನ ಐಷಾರಾಮಿ ಸೆವೆನ್ ಸ್ಟಾರ್ ಆದ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು ಬುಕ್ ಕಾದಿರಿಸಲಾಗಿದೆ. ಎರಡು ತಿಂಗಳವರೆಗೆ, ಅಂದರೆ ಸೆಪ್ಟೆಂಬರ್ವರೆಗೆ ಇಡೀ ಹೋಟೆಲ್ ಅನ್ನು ಅಂಬಾನಿ ಕುಟುಂಬ ಕಾಯ್ದಿರಿಸಿದೆ. ಇಲ್ಲಿಯೇ ಮದುವೆನಂತರದ ಕಾರ್ಯಕ್ರಮ ನಡೆಯುವುದು ಖಚಿತ ಎನ್ನಲಾಗಿದೆ.
ಕಾರ್ಯಕ್ರಮಕ್ಕೆ ಗಣ್ಯರ ಭೇಟಿ
ಪ್ರಿನ್ಸ್ ಹ್ಯಾರಿ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ವಿವಾಹೋತ್ತರ ಆಚರಣೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬ್ರಿಟಿಷ್ ಟ್ಯಾಬ್ಲಾಯ್ಡ್ ಒಂದರಲ್ಲಿ ವರದಿ ಮಾಡಲಾಗಿದೆ. ಬೋರಿಸ್ ಜಾನ್ಸನ್ ಮತ್ತು ಟೋನಿ ಮತ್ತು ಚೆರಿ ಬ್ಲೇರ್ ಅವರೂ ಬರುವ ನಿರೀಕ್ಷೆ ಇದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿವಾಹ ಸಮಾರಂಭಗಳಿಗೆ ಭಾರೀ ಹಣ ವೆಚ್ಚ
ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆ ಜುಲೈ 12ಕ್ಕೆ ನಡೆದಿದ್ದು 500 ಮಿಲಿಯನ್ ಡಾಲರ್ ಹಣ ವೆಚ್ಚವಾಗಿತ್ತು. ಹೀಗಾಗಿ, ಲಂಡನ್ನ ಸ್ಟೋಕ್ ಪಾರ್ಕ್ ಹೋಟೆಲ್ನಲ್ಲಿ ನಡೆಯುವ ವಿವಾಹೋತ್ತರ ಸಮಾರಂಭ ಕೂಡ ಭಾರೀ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ