ಸಿದ್ದರಾಮಯ್ಯ ತಪ್ಪು ಮಾಡಿರದಿದ್ದರೆ ಹೆದರಿಕೆ ಯಾಕೆ?- ಬಿವೈ ವಿಜಯೇಂದ್ರ
ಬೆಂಗಳೂರು , 26 ಜುಲೈ (ಹಿ.ಸ.) : ಆ್ಯಂಕರ್ : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿರದಿದ್ದರೆ ಮತ್ತು ಅವರಿಗೆ 14 ಸೈಟುಗಳು ನ್ಯಾಯಯುತವಾಗೇ ಸಿಕ್ಕಿದ್ದರೆ, ಯಾಕೆ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ, ಯಾಕೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ
ಸಿದ್ದರಾಮಯ್ಯ ತಪ್ಪು ಮಾಡಿರದಿದ್ದರೆ ಹೆದರಿಕೆ ಯಾಕೆ?- ಬಿವೈ ವಿಜಯೇಂದ್ರ


ಬೆಂಗಳೂರು , 26 ಜುಲೈ (ಹಿ.ಸ.) :

ಆ್ಯಂಕರ್ : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿರದಿದ್ದರೆ ಮತ್ತು ಅವರಿಗೆ 14 ಸೈಟುಗಳು ನ್ಯಾಯಯುತವಾಗೇ ಸಿಕ್ಕಿದ್ದರೆ, ಯಾಕೆ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ, ಯಾಕೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಕ್ಷಾಂತರ ಜನ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ, ಆ ಅರ್ಜಿಗಳನ್ನು ಕಡೆಗಣಿಸಿ ಸಿದ್ದರಾಮಯ್ಯನವರ ಕುಟುಂಬಕ್ಕೆ ಸೈಟುಗಳನ್ನು ನೀಡಿರುವುದು ನ್ಯಾಯಯುತವೇ? ಅನ್ಯಾಯ ಅಕ್ರಮಗಳು ನಡೆದಾಗ ಪ್ರತಿಪಕ್ಷದ ಸದಸ್ಯರಾಗಿರುವ ನಾವು ಪ್ರಶ್ನೆ ಕೇಳುತ್ತೇವೆ, ಅದು ನಮ್ಮ ಅಧಿಕಾರ ಮತ್ತು ಹಕ್ಕು. ಪ್ರಶ್ನೆಗಳಿಗೆ ಉತ್ತರ ನೀಡುವುದು ಸರ್ಕಾರದ ಮುಖ್ಯಸ್ಥನಾಗಿರುವ ಮುಖ್ಯಮಂತ್ರಿಯವರ ಜವಾಬ್ದಾರಿ, ಅವರು ಪಲಾಯನ ಮಾಡುವುದರಲ್ಲಿ ಅರ್ಥವಿಲ್ಲ. ಮುಡಾ ಹಗರಣದ ಬಗ್ಗೆ ನಾವು ಪ್ರತಿ ಪಕ್ಷವಾಗಿ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಹೇಳಿದರು. ಪರಿಶಿಷ್ಠ ಜಾತಿ/ಪಂಗಡ ಸಮುದಾಯಗಳ ಜನರಿಗೆ ಸಿಗಬೇಕಿದ್ದ ಸೈಟುಗಳು ಪ್ರತಿಷ್ಠಿತ ಕುಟುಂಬದ ಪಾಲಾಗಿರುವುದು ನಿಜಕ್ಕೂ ವಿಷಾದನೀಯ ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande