ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು
ಹುಬ್ಬಳ್ಳಿ, 26 ಜುಲೈ (ಹಿ.ಸ.) ಆ್ಯಂಕರ್:ಹುಬ್ಬಳ್ಳಿ ನಗರದ ಕೇಶ್ವಾಪುರದ ಭುವನೇಶ್ವರ ಜ್ಯೂವಲರಿ ಶಾಪ್ ನ್ನು ಕಳ್ಳತನದ ಆರೋಪಿ ಹಾಗೂ ಆತನ ಸಹಚರರನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಫರಾನ್ ಶೇಖ್ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎ
Firing4


Firing 3


Firing2


Firing


ಹುಬ್ಬಳ್ಳಿ, 26 ಜುಲೈ (ಹಿ.ಸ.)

ಆ್ಯಂಕರ್:ಹುಬ್ಬಳ್ಳಿ ನಗರದ ಕೇಶ್ವಾಪುರದ ಭುವನೇಶ್ವರ ಜ್ಯೂವಲರಿ ಶಾಪ್ ನ್ನು ಕಳ್ಳತನದ ಆರೋಪಿ ಹಾಗೂ ಆತನ ಸಹಚರರನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಫರಾನ್ ಶೇಖ್ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಗಾಯಗೊಂಡ ಸಿಬ್ಬಂದಿ ಹಾಗೂ ಆರೋಪಿಯ ಭೇಟಿ‌ ಬಳಿಕ ಕಿಮ್ಸ್ ಆಸ್ಪತ್ರೆಯಲ್ಲಿ ಮಾತನಾಡಿದ ಅವರು,

ಜು. 17 ರಂದು ಕಳ್ಳತನ ಮಾಡಲಾಗಿತ್ತು. ಈ

ಗೋಲ್ಡ್ ಶಾಪ್ ನಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಬಂಗಾರ,ಬೆಳ್ಳಿ ಕಳ್ಳತನವಾಗಿತ್ತು. ಈ ಕೇಸ್ ಗೆ ಸಂಬಂಧಿಸಿದಂತೆ ಮುಂಬೈ ಮೂಲದ

ಫರಾನ್ ಶೇಖ್ ಎಂಬ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಹತ್ತು ದಿನ ನಿರಂತರ ಪ್ರಯತ್ನದಿಂದ ಓರ್ವನನ್ನ ಅರೆಸ್ಟ್ ಮಾಡಲಾಗಿದೆ. ಇವತ್ತು ಆತ ಗಾಮನಗಟ್ಟಿ ಪ್ರದೇಶಕ್ಕೆ ತನ್ನ

ಸಹಚರನ್ನು ತೋರಿಸಲು ಕರೆದುಕೊಂಡು ಹೋಗಿದ್ದ..

ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾನೆ. ಆಗ

ಆತನ ಮೇಲೆ ಫೈರಿಂಗ್ ಮಾಡಲಾಗಿದೆ. ಆರೋಪಿ ಫರಾನ್ ಶೇಖ ಗಾಮನಗಟ್ಟಿ ಪ್ರದೇಶದ ಇಬ್ಬರನ್ನು 2000 ಹಣ ಕೊಟ್ಟು ಪರಿಚಯ ಮಾಡಿಕೊಂಡಿದ್ದ.

ಈತ ಅಂತರಾಜ್ಯ ಕಳ್ಳತನ ಆರೋಪಿಯಾಗಿದ್ದು, ಕೊಲೆ,ಕಳ್ಳತನ,ಸೇರಿ ಅನೇಕ ಕೇಸ್ ಇವನ ಮೇಲಿವೆ ಎಂದರು‌.

ನಮ್ಮ ಸಿಬ್ಬಂದಿಗಳಾದ ಸುಜಾತ,ಮಹೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ತಪ್ಪಿಸಿಕೊಂಡು ಓಡುವಾಗ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್ ಐ ಕವಿತಾ ಫೈರ್ ಮಾಡಿದ್ದಾರೆ.

ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ. ಸದ್ಯ ಕಿಮ್ಸ್ ಆಸ್ಪತ್ರೆಗೆ ದಾಖಲು ‌ಮಾಡಲಾಗಿದೆ.

ಉಳಿದ ಆರೋಪಿಗಳನ್ನ‌ ಆದಷ್ಟು ಬೇಗ ಬಂಧಿಸಲಾಗುವದು. ಈ ತಂಡ

ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಬಂದಿತ್ತು. ಹುಬ್ಬಳ್ಳಿ,ಬೆಳಗಾವಿ,ವಿಜಯಪುರ ಜಿಲ್ಲೆಯಲ್ಲಿ ‌ಕಳ್ಳತನ ಮಾಡಲು ಪ್ಲ್ಯಾನ್ ಮಾಡಿದ್ದು, ಇದೊಂದು ಮೂರು ಜನರ ತಂಡವಾಗಿದೆ. ಸ್ಥಳೀಯರನ್ನು ಹಣ ಕೊಟ್ಟು ಪರಿಚಯ ಮಾಡಿಕೊಂಡು ಕಳ್ಳತನ‌ಕ್ಕೆ ಪ್ಲ್ಯಾನ್ ಮಾಡಿದ್ದರ.

ಇತರ ಆರೋಪಿಗಳು ಸಹ ಅಂತರರಾಜ್ಯ ಕಳ್ಳರಾಗಿದ್ದು,

ಕಳ್ಳರನ್ನು ಅರೆಸ್ಟ್ ಮಾಡಲು ಇನ್ನು ಮೂರು ತಂಡ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿವೆ ಎಂದು ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / Rakesh Mahadevappa / ಡಾ.ಪಿ.ವಿ.ಪ್ರಸಾದ ರಾವ್


 rajesh pande