ಘಟಪ್ರಭಾ ‌; ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಂಗುರ
ಬಾಗಲಕೋಟೆ, 26 ಜುಲೈ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಘಟಪ್ರಭಾ ‌ನದಿಗೆ ದೂಪದಾಳ, ಮಾರ್ಕಂಡೇಯ, ಬಳ್ಳಾರಿ‌ ನಾಲಾದಿಂದ ಒಟ್ಟು 60 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ತೀರದ ಹಳ್ಳಿಗಳಲ್ಲಿ ಎಲ್ಲರೂ ಜಾನುವಾರುಗಳ ಸಮೇತ ಸಾಮಾನು ಸರಂಜಾಮು ಕಟ್ಟಿಕೊಂಡು ಸ
60 Thousand Cusecs Of Water To Ghataprabha River


ಬಾಗಲಕೋಟೆ, 26 ಜುಲೈ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಘಟಪ್ರಭಾ ‌ನದಿಗೆ ದೂಪದಾಳ, ಮಾರ್ಕಂಡೇಯ, ಬಳ್ಳಾರಿ‌ ನಾಲಾದಿಂದ ಒಟ್ಟು 60 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ತೀರದ ಹಳ್ಳಿಗಳಲ್ಲಿ ಎಲ್ಲರೂ ಜಾನುವಾರುಗಳ ಸಮೇತ ಸಾಮಾನು ಸರಂಜಾಮು ಕಟ್ಟಿಕೊಂಡು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗಿದೆ.

ನದಿ ಪಾತ್ರದ ಪ್ರವಾಹಬಾಧೆಗೆ ಒಳಗಾಗುವ ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ.

ಘಟಪ್ರಭಾ ನದಿಗೆ ಜಲಾವೃತವಾಗುವ ಬಾಗಲಕೋಟೆ ‌ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮ ಜನರಿಗೆ ಸರಕಾರಿ ಪ್ರಾಥಮಿಕ ಶಾಲೆ ಕಡೆ ಬರಲು ಡಂಗುರದ‌ ಮೂಲಕ ಸೂಚನೆ ನೀಡಲಾಗಿದೆ. ಇನ್ನು ರಬಕವಿ ಬನಹಟ್ಟಿ, ಮುದೋಳ, ಬೀಳಗಿ , ಬಾಗಲಕೋಟೆ ವ್ಯಾಪ್ತಿಯಲ್ಲಿ ಈ ನದಿ ಹರಿಯುತ್ತದೆ. ನದಿ ತೀರದ ಜನರು ಜಾಗೃತರಾಗಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande