ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್
ಬೆಂಗಳೂರು, 25 ಜುಲೈ (ಹಿ.ಸ.) : ಆ್ಯಂಕರ್ : ಆಸ್ಟರಿಯಾ ಏರೋಸ್ಪೇಸ್ ಸಂಸ್ಥೆ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ವೇದಿಕೆ ಪರಿಚಯಿಸಿದೆ. ಆಸ್ಟರಿಯಾ ಏರೋಸ್ಪೇಸ್ ಎಂಬುದು ಸಂಪೂರ್ಣವಾಗಿ ಎಲ್ಲವನ್ನೂ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಕಂಪನಿ
steria-aerospaces-skydeck-platform-revolutionizes


ಬೆಂಗಳೂರು, 25 ಜುಲೈ (ಹಿ.ಸ.) :

ಆ್ಯಂಕರ್ : ಆಸ್ಟರಿಯಾ ಏರೋಸ್ಪೇಸ್ ಸಂಸ್ಥೆ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ವೇದಿಕೆ ಪರಿಚಯಿಸಿದೆ.

ಆಸ್ಟರಿಯಾ ಏರೋಸ್ಪೇಸ್ ಎಂಬುದು ಸಂಪೂರ್ಣವಾಗಿ ಎಲ್ಲವನ್ನೂ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಕಂಪನಿ. ಅದು ಅತ್ಯಾಧುನಿಕ ನವೀನ ಬಗೆಯ ಕ್ಲೌಡ್ ಪ್ಲಾಟ್ ಫಾರ್ಮ್ ಅನ್ನು ಪರಿಚಯಿಸುತ್ತಿದ್ದು, ಆ ಪ್ಲಾಟ್ ಫಾರ್ಮ್ ಹೆಸರು ಸ್ಕೈಡೆಕ್. ಇದೀಗ ಅದನ್ನು ಸ್ವಯಂ ಚಾಲಿತ ಸೆಲ್ಫ್ ಸಲ್ಯೂಷನ್ ಆಗಿ ನೀಡುತ್ತಿದೆ.

ಉದ್ಯಮಗಳಿಗೆ ಡ್ರೋನ್ ದತ್ತಾಂಶ ನಿರ್ವಹಣೆಯನ್ನು ಸುವ್ಯವಸ್ಥಿತ ಮಾಡುವುದಕ್ಕೆ ಸ್ಕೈಡೆಕ್ ಪ್ಲಾಟ್ ಫಾರ್ಮ್ ಬಲ ತುಂಬುತ್ತದೆ. ಡ್ರೋನ್ ಡೇಟಾದ ಬಳಕೆದಾರರು ಹಾಗೂ ಸೇವಾ ಪೂರೈಕೆದಾರರು ಇಬ್ಬರಿಗೂ ಇದು ಸಮಗ್ರ ಸಾಫ್ಟ್ ವೇರ್ ಪ್ಲಾಟ್ ಫಾರ್ಮ್ ರೀತಿಯಲ್ಲಿ ಸೇವೆ ಒದಗಿಸುತ್ತದೆ.

ಜಿಐಎಸ್ ನಂಥ ಉದ್ಯಮಗಳು ನಿರ್ಮಾಣ, ತೈಲ ಹಾಗೂ ಅನಿಲ, ಕೃಷಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿವೆ. ಸ್ಕೈಡೆಕ್ ಇಂಥವುಗಳಿಗೆ ತಂತ್ರಜ್ಞಾನದ ದೃಷ್ಟಿಯಿಂದ ಆಧುನಿಕವಾದ ಸಲಕರಣೆಗಳು ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ. ಅದರೊಂದಿಗೆ ಡ್ರೋನ್ ಡೇಟಾವನ್ನು ಬಳಸಿಕೊಂಡು, ಸೈಟ್ ಗಳು ಮತ್ತು ತಮ್ಮ ನಿರ್ಣಾಯಕ ಸ್ವತ್ತುಗಳನ್ನು ಡಿಜಿಟಲ್ ಆಗಿ ರೂಪಾಂತರ ಮಾಡಿಕೊಳ್ಳಬಹುದಾಗಿರುತ್ತದೆ.

ಈ ಕ್ಲೌಡ್ ಪ್ಲಾಟ್ ಫಾರ್ಮ್ ಸುರಕ್ಷಿತವಾದ, ಕೇಂದ್ರೀಕೃತ ಡ್ರೋನ್ ನಿರ್ವಹಣೆ ಒದಗಿಸುವುದರ ಜೊತೆಗೆ ತತ್ ಕ್ಷಣಕ್ಕೆ ದೃಶ್ಯವನ್ನು ಸಹ ತಂದುಕೊಳ್ಳುತ್ತದೆ, ಸಹಯೋಗ ಹಾಗೂ ವರದಿ ಮಾಡುವ ಸಾಧನಗಳೊಂದಿಗೆ ಸುವ್ಯವಸ್ಥಿತ ಸೈಟ್ ಮೇಲ್ವಿಚಾರಣೆ ಮತ್ತು ನಿಗಾ ವಹಿಸಲು ಅನುಕೂಲ ಮಾಡಿಕೊಡುತ್ತದೆ. ಸ್ಕೈಡೆಕ್ ಎಷ್ಟು ವಿಶಿಷ್ಟ ಅಂದರೆ ಅದರ ಪೂರ್ವ- ನಿರ್ಮಿತ, ಉದ್ಯಮಕ್ಕೆ ನಿರ್ದಿಷ್ಟ ಕೃತಕ ಬುದ್ಧಿಮತ್ತೆ ಮಾದರಿಗಳಿಂದಾಗಿ ಅದು ವೈಮಾನಿಕ ದತ್ತಾಂಶಗಳನ್ನು ಶೀಘ್ರವಾಗಿ ವಿಶ್ಲೇಷಣೆ ಮಾಡುತ್ತದೆ. ಪೂರ್ವಭಾವಿಯಾಗಿ ನಿರ್ಧಾರ ಒದಗಿಸುತ್ತದೆ ಮತ್ತು ಉದ್ಯಮದ ಉತ್ಕೃಷ್ಟತೆಯನ್ನು ಸಾಧಿಸುತ್ತದೆ.

ಯೋಜನಾ ನಿರ್ವಹಣೆ, ಹಾರಾಟದ ಯೋಜನೆ, ಮತ್ತು ಅನುಷ್ಠಾನ ಇವೆಲ್ಲವನ್ನೂ ಸಂಯೋಜನೆ ಮಾಡುವ ಮೂಲಕವಾಗಿ ಡ್ರೋನ್ ಸೇವಾ ಪೂರೈಕೆದಾರರಿಗೆ ಕೆಲಸದ ಹರಿವು ಸರಾಗ ಮಾಡಿಕೊಡುತ್ತದೆ ಸ್ಕೈಡೆಕ್. ಆಟೋಮೆಟೆಡ್ ಡ್ರೋನ್ ದತ್ತಾಂಶದ ಸಂಸ್ಕರಣೆಗೆ ಇದು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ, ಕ್ಲೌಡ್ ಆಧಾರಿತವಾದ ಸಲ್ಯೂಷನ್ ಆಗಿದ್ದು, ಉದ್ಯಮದ ಅಗತ್ಯಗಳಿಗೆ ವ್ಯಾಪಕವಾಗಿ ನೆರವಾಗುತ್ತದೆ. ಇದರ ಜೊತೆಗೆ ಸ್ಕೈಡೆಕ್ ಏಕೀಕೃತವಾದ ರೆಪಾಸಿಟರಿ ಡ್ರೋನ್ ದತ್ತಾಂಶವನ್ನು ಒದಗಿಸುತ್ತದೆ. ವಿಶ್ಲೇಷಣೆಯನ್ನು ಸರಳಗೊಳಿಸುತ್ತದೆ ಮತ್ತು ಬಳಕೆದಾರರೊಂದಿಗೆ ಡೇಟಾ ಹಂಚಿಕೊಳ್ಳುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande