ಪ್ಯಾರಿಸ್, 25 ಜುಲೈ (ಹಿ.ಸ.):
ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವು ಇಂದಿನಿಂದ ಅಭಿಯಾನ ಆರಂಭಿಸಲಿದೆ. ಇಂದು ನಡೆಯಲಿರುವ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್, ಬಿ ಧೀರಜ್, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಸ್ಪರ್ಧಿಸಲಿದ್ದಾರೆ.
ಈ ಸ್ಪರ್ಧೆಯೊಂದಿಗೆ ಭಾರತದ ಒಲಿಂಪಿಕ್ಸ್ ಅಭಿಯಾನ ಶುರುವಾಗಲಿದೆ. ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಸ್ಪರ್ಧಿಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್ ಭಾಗವಹಿಸಲಿದ್ದಾರೆ.
ಇದಾದ ಬಳಿಕ ಪುರುಷರ ವೈಯುಕ್ತಿಕ ಶ್ರೇಯಾಂಕ ಸುತ್ತಿನ ಆರ್ಚರಿ ಸ್ಪರ್ಧೆಗಳು ನಡೆಯಲಿವೆ.
ಪ್ಯಾರಿಸ್ 2024 ರಲ್ಲಿ ಭಾರತೀಯ ಬಿಲ್ಲುಗಾರರ ಪದಕದ ಮಹತ್ವಾಕಾಂಕ್ಷೆಗೆ ಇಂದಿನ ಶ್ರೇಯಾಂಕದ ಸುತ್ತು ನಿರ್ಣಾಯಕವಾಗಿರುತ್ತದೆ. ಶ್ರೇಯಾಂಕದ ಸುತ್ತಿನಿಂದ ಅಗ್ರ ನಾಲ್ಕು ಶ್ರೇಯಾಂಕದ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯುತ್ತವೆ. ಎಂಟರಿಂದ 12ನೇ ಶ್ರೇಯಾಂಕದ ತಂಡಗಳು ಉಳಿದ ನಾಲ್ಕು ಕ್ವಾರ್ಟರ್-ಫೈನಲ್ ಸ್ಥಾನಗಳಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ