ಬೆಂಗಳೂರು, 25 ಜುಲೈ (ಹಿ.ಸ.):
ಆ್ಯಂಕರ್ : ಮುಂಗಡ ಪತ್ರದಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲೆ ಆಮದು ಸುಂಕ ಇಳಿಸಿದ ಬಳಿಕ ಬೆಲೆ ಬಹಳಷ್ಟು ಕಡಿಮೆಗೊಂಡಿದೆ. ಭಾರತ ಮತ್ತು ಕೆಲ ಇತರ ದೇಶಗಳ ನಡುವಿನ ಚಿನ್ನದ ಬೆಲೆಯಲ್ಲಿನ ಅಂತರ ಹೆಚ್ಚೇನಿಲ್ಲ. ಇವತ್ತು ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ದಟ್ಟವಾಗಿದೆ. ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್ಗೆ 8 ರೂಗೂ ಹೆಚ್ಚು ಮೊತ್ತದಷ್ಟು ಇಳಿಕೆ ಕಂಡಿದೆ. ಚಿನ್ನದ ಬೆಲೆಯಲ್ಲೂ ಕೂಡ 255 ರೂ.ನಷ್ಟು ಕಡಿಮೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ಅಮೂಲ್ಯ ಲೋಹಗಳು ಕಂಡ ಗರಿಷ್ಠ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 64,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 70,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,750 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 64,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,875 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 25ಕ್ಕೆ)
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 25ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,860 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 887.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,860 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 875 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 64,950 ರೂ
ಚೆನ್ನೈ: 64,900 ರೂ
ಮುಂಬೈ: 64,950 ರೂ
ದೆಹಲಿ: 65,100 ರೂ
ಕೋಲ್ಕತಾ: 64,950 ರೂ
ಕೇರಳ: 64,950 ರೂ
ಅಹ್ಮದಾಬಾದ್: 65,000 ರೂ
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ