ತುಂಬಿದ ತುಂಗಭದ್ರೆ ; ಹೆಚ್ಚುತ್ತಿರುವ ಒಳಹರಿವು ; ನದಿಗೆ ನೀರು ; ಎಚ್ಚರಿಕೆ
ಹೊಸಪೇಟೆ, 25 ಜುಲೈ (ಹಿ.ಸ.) : ಆ್ಯಂಕರ್ : ತುಂಗಭದ್ರಾ ಜಲಾಶಯದ ನೀರಿನ ಒಳಹರಿವಿನ ಮಟ್ಟ ಕ್ರಮೇಣ ಹೆಚ್ಚುತ್ತಿದ್ದು, 1 ಲಕ್ಷ ಕ್ಯುಸೆಕ್‍ನಿಂದ 1.50 ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಗಳಿದ್ದು, 28 ಕ್ರೆಸ್ಟ್‍ಗೇಟುಗಳಿಂದ ನದಿಗೆ ನೀರನ್ನು ಹೊರ ಹರಿಬಿಡಲಾಗುತ್ತಿದೆ. ಹೊರ ಹರಿವು ಹೆಚ್ಚುವ ಸಾಧ್ಯತೆಗಳಿದ್ದ
ತುಂಬಿದ ತುಂಗಭದ್ರೆ ; ಹೆಚ್ಚುತ್ತಿರುವ ಒಳಹರಿವು ; ನದಿಗೆ ನೀರು ; ಎಚ್ಚರಿಕೆ


ತುಂಬಿದ ತುಂಗಭದ್ರೆ ; ಹೆಚ್ಚುತ್ತಿರುವ ಒಳಹರಿವು ; ನದಿಗೆ ನೀರು ; ಎಚ್ಚರಿಕೆ


ಹೊಸಪೇಟೆ, 25 ಜುಲೈ (ಹಿ.ಸ.) :

ಆ್ಯಂಕರ್ : ತುಂಗಭದ್ರಾ ಜಲಾಶಯದ ನೀರಿನ ಒಳಹರಿವಿನ ಮಟ್ಟ ಕ್ರಮೇಣ ಹೆಚ್ಚುತ್ತಿದ್ದು, 1 ಲಕ್ಷ ಕ್ಯುಸೆಕ್‍ನಿಂದ 1.50 ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಗಳಿದ್ದು, 28 ಕ್ರೆಸ್ಟ್‍ಗೇಟುಗಳಿಂದ ನದಿಗೆ ನೀರನ್ನು ಹೊರ ಹರಿಬಿಡಲಾಗುತ್ತಿದೆ. ಹೊರ ಹರಿವು ಹೆಚ್ಚುವ ಸಾಧ್ಯತೆಗಳಿದ್ದು, ನದಿಯ ಅಕ್ಕಪಕ್ಕದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.

ಗುರುವಾರ ಬೆಳಗ್ಗೆಯಿಂದಲೇ ತುಂಗಭದ್ರ ಜಲಾಶಯಕ್ಕೆ ಒಳಹರಿವು ನಿರೀಕ್ಷೆಗಿಂತಲೂ ಹೆಚ್ಚಾಗುತ್ತಿದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಜಲಾಶಯದ 20 ಕ್ರೆಸ್ಟ್‍ಗೇಟುಗಳನ್ನು ಎರೆಡು ಅಡಿ ಎತ್ತರದಲ್ಲಿ ಮತ್ತು 8 ಕ್ರೆಸ್ಟ್‍ಗೇಟುಗಳನ್ನು ಒಂದು ಅಡಿ ಎತ್ತರದಲ್ಲಿ ತೆರೆದು ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಆದರೆ, ಜಲಾಶಯಕ್ಕೆ ಒಳ ಹರಿವು 1 ಲಕ್ಷ ಕ್ಯುಸೆಕ್ ಪರಮಾಣದಿಂದ 1.50 ಲಕ್ಷ ಕ್ಯುಸೆಕ್ ಪ್ರಮಾಣ ದಾಟುವ ಸಾಧ್ಯತೆಗಳನ್ನು ಅಂದಾಜಿಸಿರುವ ಜಲಾಶಯದ ಅಧಿಕಾರಿಗಳು, ಯಾವುದೇ ಸಂದರ್ಭದಲ್ಲಿ ಎಲ್ಲಾ ಉಳಿದ 4 ಕ್ರೆಸ್ಟ್‍ಗೇಟುಗಳನ್ನು ತೆರೆದು ನದಿಗೆ ನೀರನ್ನು ಹೊರ ಹರಿದುಬಿಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಡಳಿತವು, ನದಿ ಅಕ್ಕಪಕ್ಕದ ಹಳ್ಳಿಗಳಿಗೆ ಎಚ್ಚರಿಕೆ ನೀಡುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿಬ್ಬಂದಿ ಮತ್ತು ತಜ್ಞರಜೊತೆಯಲ್ಲಿ ನಿರಂತರ ಸಂಪರ್ಕದೊಂದಿಗೆ ಸದಾ ಸನ್ನದ್ಧವಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ


 rajesh pande