ಇಂದಿನಿಂದ ಪ್ಯಾರಿಸ್ ಒಲಿಂಪಿಕ್ಸ್
ಪ್ಯಾರಿಸ್, 24 ಜುಲೈ (ಹಿ.ಸ.) : ಆ್ಯಂಕರ್ : ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದು ಚಾಲನೆ ದೊರೆಯಲಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಜುಲೈ 26 ಕ್ಕೆ ನಿಗದಿಪಡಿಸಲಾಗಿದ್ದರೂ, ಕೆಲವು ಪಂದ್ಯಾವಳಿಗಳು ಇಂದಿನಿಂದ ಶುರುವಾಗಲಿವೆ. ಅದರಂತೆ ಫುಟ್​ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂ
Paris Olympics 2024 Starting From Today


ಪ್ಯಾರಿಸ್, 24 ಜುಲೈ (ಹಿ.ಸ.) :

ಆ್ಯಂಕರ್ : ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದು ಚಾಲನೆ ದೊರೆಯಲಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಜುಲೈ 26 ಕ್ಕೆ ನಿಗದಿಪಡಿಸಲಾಗಿದ್ದರೂ, ಕೆಲವು ಪಂದ್ಯಾವಳಿಗಳು ಇಂದಿನಿಂದ ಶುರುವಾಗಲಿವೆ. ಅದರಂತೆ ಫುಟ್​ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಮುಖಾಮುಖಿಯಾಗಲಿದೆ.

ಉದ್ಘಾಟನೆಗೂ ಮುನ್ನ ಪಂದ್ಯಗಳ ಆರಂಭವೇಕೆ?

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪಂದ್ಯಾವಳಿ ಆರಂಭಿಸುವ ಸಂಪ್ರದಾಯ ಶುರುವಾಗಿದ್ದು, 1992 ರಲ್ಲಿ. ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ನಡೆಸಲಾಗಿತ್ತು. ಇದಾದ ಬಳಿಕ ಪ್ರತಿ ಒಲಿಂಪಿಕ್ಸ್​ನಲ್ಲೂ ಈ ಸಾಂಪ್ರದಾಯ ಮುಂದುವರೆಸಲಾಗಿದೆ.

ಇದಕ್ಕೆ ಮುಖ್ಯ ಕಾರಣವೆಂದರೆ ಆಟಗಾರರ ವಿಶ್ರಾಂತಿ. ಅಂದರೆ ಫುಟ್​ಬಾಲ್, ರಗ್ಬಿ, ಬಾಸ್ಕೆಟ್​ಬಾಲ್​ನಂತಹ ಕ್ರೀಡೆಗಳಲ್ಲಿ ಕಣಕ್ಕಿಳಿಯುವ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ 48 ಗಂಟೆಗಳ ವಿಶ್ರಾಂತಿ ನೀಡುವ ಸಲುವಾಗಿ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ಆಯೋಜಿಸುವ ಸಾಂಪ್ರದಾಯಕ್ಕೆ ನಾಂದಿ ಹಾಡಲಾಯಿತು.

ಹಾಗೆಯೇ ಮತ್ತೊಂದು ಕಾರಣವೆಂದರೆ ಮೈದಾನದ ಬಳಕೆ. ಫುಟ್​ಬಾಲ್​, ರಗ್ಬಿ ಸೇರಿದಂತೆ ಕೆಲ ಪಂದ್ಯಗಳು ದೀರ್ಘಾವಧಿಯಲ್ಲಿ ನಡೆಯುತ್ತವೆ. ಅಂದರೆ ಮೊದಲ ಸುತ್ತು, ದ್ವಿತೀಯ ಸುತ್ತು, ಸೆಮಿಫೈನಲ್, ಫೈನಲ್…ಹೀಗೆ ಸಾಗುತ್ತದೆ. ಇಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಪಂದ್ಯಗಳನ್ನೂ ಸಹ ಆಯೋಜಿಸಬೇಕಾಗುತ್ತದೆ. ಹೀಗಾಗಿ ಸತತ ಪಂದ್ಯಗಳನ್ನು ಆಯೋಜಿಸಲು ಮೈದಾನದ ಅಗತ್ಯತೆಯಿರುತ್ತದೆ. ಹಾಗಾಗಿ ಒಲಿಂಪಿಕ್ಸ್​ನ ಇತರೆ ಪಂದ್ಯಗಳು ಆರಂಭವಾಗುವ ಮುನ್ನವೇ ಫುಟ್​ಬಾಲ್ ಸೇರಿದಂತೆ ಕೆಲ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande