ದುಬೈ, 23 ಜುಲೈ (ಹಿ.ಸ.) :
ಆ್ಯಂಕರ್ : ತಮ್ಮ ಬಂಧನ ವಿಚಾರ ಸುಳ್ಳು ಎಂದು ಪಾಕಿಸ್ತಾನಿ ಗಾಯಕ ರಾಹತ್ ಫತೇ ಅಲಿ ಖಾನ್ ಅವರು ಸ್ಪಷ್ಟನೆ ನೀಡಿ ವಿಡಿಯೋ ಮಾಡಿದ್ದಾರೆ.
ರಾಹತ್ ಫತೇ ಅಲಿ ಖಾನ್ ಅವರು ಪಾಕಿಸ್ತಾನಿ ಗಾಯಕ. ಅವರು ಗಜಲ್ಸ್, ಸೂಫಿ ಮ್ಯೂಸಿಕ್ ಮೂಲಕ ಖ್ಯಾತಿ ಆಗಿದ್ದಾರೆ. ಪಾಕಿಸ್ತಾನದ ಸಿನಿಮಾ, ಧಾರಾವಾಹಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ‘ಜೂಮ್ ಬರಾಬರ್ ಜೂಮ್’, ‘ನಮಸ್ತೆ ಲಂಡನ್’, ‘ಐ ಹೇಟ್ ಲವ್ ಸ್ಟೋರಿ’, ‘ದಬಾಂಗ್’, ‘ಬಾಡಿಗಾರ್ಡ್’, ‘ಸುಲ್ತಾನ್’ ಸೇರಿ ಅನೇಕ ಸಿನಿಮಾಗಳ ಹಾಡನ್ನು ಅವರು ಹಾಡಿದ್ದಾರೆ.
ಬಂಧನ ವಿಚಾರ ಸುಳ್ಳು ಎಂದು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
‘ನಾನು ಹಾಡುಗಳ ರೆಕಾರ್ಡ್ಗೋಸ್ಕರ ಇಲ್ಲಿಗೆ ಬಂದಿದ್ದೇನೆ. ದೇವರ ದೆಯೆಯಿಂದ ಎಲ್ಲವೂ ಚೆನ್ನಾಗಿ ಸಾಗುತ್ತಿದೆ’ ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ. ಈ ಮೂಲಕ ಎಲ್ಲವೂ ಸರಿಯಾಗಿದೆ ಎಂಬ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋಗೆ ನೀಡಿದ ಶೀರ್ಷಿಕೆಯಲ್ಲಿ ‘ರಾಹತ್ ಫತೇ ಅಲಿ ಖಾನ್ ಬಂಧನ ಅನ್ನೋದು ಸುಳ್ಳು ಮತ್ತು ಆಧಾರ ರಹಿತ’ ಎಂದು ಬರೆಯಲಾಗಿದೆ.
ರಾಹತ್ ಮಾಜಿ ಮ್ಯಾನೇಜರ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ರಾಹತ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿರೋದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ