ನವದೆಹಲಿ, 23 ಜುಲೈ (ಹಿ.ಸ.) :
ಆ್ಯಂಕರ್ : ಉದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಪ್ರತಿಪಕ್ಷಗಳ ಕಠಿಣ ಪ್ರಶ್ನೆಗಳ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಗಳವಾರ ಮೋದಿ 3.0 ಅವಧಿಯ ಮೊದಲ ಕೇಂದ್ರ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ.
ಸೀತಾರಾಮನ್ ಅವರು ತಮ್ಮ ಏಳನೇ ಕೇಂದ್ರ ಬಜೆಟ್ ಮುಂಗಡ ಪತ್ರದಲ್ಲಿ, ಹೊಸ ಉತ್ಪಾದನಾ ಸೌಲಭ್ಯಗಳಿಗೆ ತೆರಿಗೆ ಪ್ರೋತ್ಸಾಹವನ್ನು ನೀಡುವ ಸಾಧ್ಯತೆಯಿದೆ. ಉದ್ಯೋಗಗಳನ್ನು ಸೃಷ್ಟಿಸಲು ಕ್ಷೇತ್ರಗಳಾದ್ಯಂತ ಸ್ಥಳೀಯ ಸಂಗ್ರಹಣೆಯನ್ನು ಉತ್ತೇಜಿಸುವ ಸಾಧ್ಯತೆಯಿದೆ.
ವಿತ್ತ ಸಚಿವರು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸುತ್ತಾರೆಯೇ ಎಂಬುದು ಅವರ ಬಜೆಟ್ ಭಾಷಣದಲ್ಲಿ ಬಹು ನಿರೀಕ್ಷಿತ ಭಾಗವಾಗಿದೆ. ಚುನಾವಣಾ ಪೂರ್ವ ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಏನೂ ಸಿಗಲಿಲ್ಲ. ಹಾಗಾಗಿ ಅವರ ನಿರೀಕ್ಷೆಗಳು ಹೆಚ್ಚಿವೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ