ಮುಂಬೈ, 22 ಜುಲೈ (ಹಿ.ಸ.) :
ಆ್ಯಂಕರ್ : ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಆಗಿರುವ ಜಾಸ್ಮಿನ್ ಭಾಸಿನ್ ಅವರು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸ್ವತಃ ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಕಣ್ಣಿಗೆ ಲೆನ್ಸ್ ಹಾಕುವ ಪ್ರಯತ್ನದಲ್ಲಿ ಇದ್ದ ಅವರು ಕಣ್ಣಿನ ಕಾರ್ನಿಯಲ್ಗೆ ಹಾನಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ದೃಷ್ಟಿಗೆ ತೊಂದರೆ ಆಗಿದೆ. ಇದರಿಂದ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಒಂದು ಕಣ್ಣಿಗೆ ಅವರು ಬ್ಯಾಂಡೇಜ್ ಹಾಕಿಕೊಂಡು ಫೋಟೋನ ಅಪ್ಲೋಡ ಮಾಡಿದ್ದಾರೆ.
ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ‘ಜುಲೈ 17ರಂದು ನಾನು ದೆಹಲಿಯಲ್ಲಿ ಇದ್ದೆ. ಕಾರ್ಯಕ್ರಮ ಒಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ನನ್ನ ಕಾಂಟ್ಯಾಕ್ಟ್ ಲೆನ್ಸ್ನಲ್ಲಿ ಏನು ಸಮಸ್ಯೆ ಆಯಿತು ಅನ್ನೋದು ಗೊತ್ತಿಲ್ಲ. ಅದನ್ನು ಧರಿಸಿದೆ. ಆಗ ನನ್ನ ಕಣ್ಣಿಗೆ ತೊಂದರೆ ಆಗೋಕೆ ಆರಂಭ ಆಯಿತು. ಕಣ್ಣು ಉರಿಯೋಕೆ ಆರಂಭಿಸಿತು. ನಂತರ ನಿಧಾನವಾಗಿ ಆ ಉರಿ ಹೆಚ್ಚಾಯಿತು’ ಎಂದಿದ್ದಾರೆ ಅವರು.
‘ನಾನು ವೈದ್ಯರ ನೋಡಬೇಕು ಎಂದುಕೊಂಡೆ. ಆದರೆ ಕೆಲಸದ ಕಾರಣದಿಂದ ಅದು ಸಾಧ್ಯವಾಗಿಲ್ಲ. ನಾನು ಮೊದಲು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆ ಬಳಿಕ ವೈದ್ಯರನ್ನು ನೋಡಬೇಕು ಎಂದುಕೊಂಡೆ. ಹೀಗಾಗಿ ಕಾರ್ಯಕ್ರಮದಲ ನಾನು ಸನ್ಗ್ಲಾಸ್ ಧರಿಸಿದೆ. ಈ ವಿಚಾರವನ್ನು ನನ್ನ ಟೀಂನವರು ಒಳ್ಳೆಯ ರೀತಿಯಲ್ಲಿ ಸಹಕಾರ ಮಾಡಿದರು. ಈ ಘಟನೆ ಬಳಿಕ ನನಗೆ ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್ಗೆ ಹಾನಿ ಆಗಿದೆಯಂತೆ. ಅವರು ಕಣ್ಣಿಗೆ ಬ್ಯಾಡ್ಜ್ ಹಾಕಿದ್ದಾರೆ’ ಎಂದಿದ್ದಾರೆ ಅವರು.
ಜಾಸ್ಮಿನ್ ಅವರು ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿದ್ದಾರೆ. ಜಾಸ್ಮಿನ್ ಅವರು ಕನ್ನಡದ ‘ಕ್ರೋರ್ಪತಿ’ ಸಿನಿಮಾದಲ್ಲಿ ನಟಿಸಿದ್ದರು. ಕೋಮಲ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಇದರ ಜೊತೆಗೆ ಹಿಂದಿ ಬಿಗ್ ಬಾಸ್ನಲ್ಲೂ ಅವರು ಭಾಗಿ ಆಗಿದ್ದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ