ಚಂಡೀಪುರ ವೈರಸ್‍ಗೆ ಗುಜರಾತ್ ತತ್ತರ
ಗಾಂಧಿನಗರ್, 21 ಜುಲೈ (ಹಿ.ಸ.) : ಆ್ಯಂಕರ್ : ಗುಜರಾತ್‍ನಲ್ಲಿ ಚಂಡೀಪುರ ವೈರಸ್ ಹಾವಳಿ ಮೀತಿ ಮೀರಿದೆ. ಇದುವರೆಗೂ ರಾಜ್ಯದಲ್ಲಿ 50 ಮಂದಿಗೆ ವೈರಸ್ ಹರಡಿದೆ ಹಾಗೂ 16 ಮಂದಿ ಬಲಿಯಾಗಿದ್ಧಾರೆ. ಹಿಮ್ಮತ್‍ಪುರದಲ್ಲಿ 14 ಚಂಡೀಪುರ ವೈರಸ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಏಳು ರೋಗಿಗಳು ದಾಖಲಾಗಿದ್ದ
chandipura-virus-in-gujarat-killed-16-children


ಗಾಂಧಿನಗರ್, 21 ಜುಲೈ (ಹಿ.ಸ.) :

ಆ್ಯಂಕರ್ : ಗುಜರಾತ್‍ನಲ್ಲಿ ಚಂಡೀಪುರ ವೈರಸ್ ಹಾವಳಿ ಮೀತಿ ಮೀರಿದೆ. ಇದುವರೆಗೂ ರಾಜ್ಯದಲ್ಲಿ 50 ಮಂದಿಗೆ ವೈರಸ್ ಹರಡಿದೆ ಹಾಗೂ 16 ಮಂದಿ ಬಲಿಯಾಗಿದ್ಧಾರೆ.

ಹಿಮ್ಮತ್‍ಪುರದಲ್ಲಿ 14 ಚಂಡೀಪುರ ವೈರಸ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಏಳು ರೋಗಿಗಳು ದಾಖಲಾಗಿದ್ದಾರೆ, ಮೂರು ಪ್ರಕರಣಗಳು ಇತರ ರಾಜ್ಯಗಳಿಂದ ಬಂದಿವೆ, ಇಡೀ ರಾಜ್ಯದಲ್ಲಿ 50 ಚಂಡಿಪುರ ವೈರಸ್ ಪ್ರಕರಣಗಳು ಮತ್ತು 16 ಸಾವು ಪ್ರಕರಣಗಳು ವರದಿಯಾಗಿವೆ ಎಂದು ಗುಜರಾತ್ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ತಿಳಿಸಿದ್ದಾರೆ.

ಪ್ರತಿ ಗ್ರಾಮ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ ಮತ್ತು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳು, ಮುಖ್ಯ ಜಿಲ್ಲಾ ಆರೋಗ್ಯಾಧಿಕಾರಿ (ಸಿಡಿಎಚ್‍ಒ) ಮತ್ತು ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಅವರು ಹೇಳಿದರು.

ಗುಜರಾತಿನಲ್ಲಿ ಚಂಡೀಪುರ ವೈರಸ್‍ನ ಲಕ್ಷಣಗಳು ಕಂಡು ಬಂದಿದ್ದು, ಇದು ಸ್ವಲ್ಪ ಭಯವನ್ನುಂಟು ಮಾಡಿದೆ. ಏಳು ಪ್ರಕರಣಗಳನ್ನು ಲ್ಯಾಬ್ ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ, ಅದರಲ್ಲಿ ಒಂದು ಪ್ರಕರಣ ಮಾತ್ರ ಚಂಡಿಪುರ ವೈರಸ್‍ನ ಪ್ರಕರಣ ಪತ್ತೆಯಾಗಿದೆ. ಇದು ಊತ ಮತ್ತು ಅತಿಸಾರದಂತಹ ಎಲ್ಲಾ ರೋಗಲಕ್ಷಣಗಳಿಗೆ ಕಾರಣವಾಗಿದೆ, ಇದು ವೈರಸ್‍ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯು ಇಡೀ ರಾಜ್ಯದಲ್ಲಿ ಪ್ರಸಾರವಾಗಿದೆ.

ಇದಕ್ಕೂ ಮೊದಲು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಚಂಡೀಪುರ ವೈರಸ್ ಮಧ್ಯೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಅವಲೋಕನ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande