
ನವದೆಹಲಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಮನೋಹರ್ ಲಾಲ್, ಪ್ರಹ್ಲಾದ್ ಜೋಶಿ, ಹರ್ಷ್ ಮಲ್ಹೋತ್ರಾ ಹಾಗೂ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಇಂಧನದ ವಿವೇಚನಾಯುಕ್ತ ಹಾಗೂ ಜವಾಬ್ದಾರಿಯುತ ಬಳಕೆಗೆ ಕರೆ ನೀಡಿ, ಅನಗತ್ಯ ಇಂಧನ ವ್ಯರ್ಥವನ್ನು ತಡೆಗಟ್ಟುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಇಂಧನವನ್ನು ಬುದ್ಧಿವಂತಿಕೆಯಿಂದ ಬಳಸುವುದು ಇಂದಿನ ಅಗತ್ಯವಾಗಿದ್ದು, ವಿದ್ಯುತ್ ಉಳಿತಾಯ, ಶುದ್ಧ ಇಂಧನದ ಅಳವಡಿಕೆ ಮತ್ತು ತ್ಯಾಜ್ಯ ಕಡಿತವು ಪರಿಸರ ರಕ್ಷಣೆಗೆ ಅತ್ಯಗತ್ಯ ಎಂದು ಹೇಳಿದರು. ಇಂದಿನ ಜಾಗೃತ ಇಂಧನ ಆಯ್ಕೆಗಳು ಮುಂದಿನ ಪೀಳಿಗೆಗೆ ಸುಸ್ಥಿರ ಮತ್ತು ಬಲವಾದ ಭವಿಷ್ಯವನ್ನು ಖಚಿತಪಡಿಸುತ್ತವೆ ಎಂದು ಹೇಳಿದ್ದಾರೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಅವರು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಇಂಧನ ಸಂರಕ್ಷಣೆಗೆ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದ್ದು. ಅನಗತ್ಯ ಇಂಧನ ಬಳಕೆಯನ್ನು ಕಡಿಮೆ ಮಾಡುವುದರೊಂದಿಗೆ ಇತರರನ್ನೂ ಅದಕ್ಕೆ ಪ್ರೇರೇಪಿಸುವುದು ಅವಶ್ಯಕ ಸಾಮೂಹಿಕ ಪ್ರಯತ್ನಗಳಿಂದಲೇ ಉತ್ತಮ ಭವಿಷ್ಯ ಸಾಧ್ಯ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಇಂದು ಉಳಿಸಿದ ಇಂಧನವೇ ನಾಳೆ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದು, ಜವಾಬ್ದಾರಿಯುತ ಇಂಧನ ಬಳಕೆಗೆ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಇಂಧನ-ಸಮರ್ಥ ಅಭ್ಯಾಸಗಳನ್ನು ಅಳವಡಿಸಿಕೊಂಡು ಸ್ವಚ್ಛ ಮತ್ತು ಹಸಿರು ಭಾರತದತ್ತ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa