ಕೊಲಂಬೊ, 21 ಜುಲೈ (ಹಿ.ಸ.) :
ಆ್ಯಂಕರ್ : ಏಷ್ಯಾ ಕಪ್ ಟಿ-೨೦ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾದ ದಾಂಬೂಲ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ಭಾರತ, ಯುಎಇ ತಂಡವನ್ನು ಎದುರಿಸಲಿದೆ.
ಪಂದ್ಯ ಭಾರತೀಯ ಕಾಲಮಾನ ಅಪರಾಹ್ನ ೨ ಗಂಟೆಗೆ ಆರಂಭಾವಾಗಲಿದೆ.
ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ. ಸೆಮಿ ಫೈನಲ್‌ಗೆ ಸ್ಥಾನ ಪಡೆದುಕೊಳ್ಳಲಿದೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಂಕಾಕ್ಕೆ ೭ ವಿಕೆಟ್ ಗಳಿಂದ ಜಯಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೧೧ ರನ್ ಗಳಿಸಿತ್ತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ ಥೈಲ್ಯಾಂಡ್ ೨೨ ರನ್‌ಗಳ ಗೆಲುವು ಸಾಧಿಸಿದೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ