, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಡೆಕ್ಕನ್ ಅರೆನಾದಲ್ಲಿ ನಡೆಯುತ್ತಿರುವ ೭೮ ನೇ ಹಿರಿಯರ ಪುರುಷರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್ ಸಂತೋಷ್ ಟ್ರೋಫಿಯಲ್ಲಿ ಕೊನೆಯ ಎರಡು ಕ್ವಾರ್ಟರ್-ಫೈನಲ್ ಸ್ಥಾನಗಳನ್ನು ದೆಹಲಿ ಹಾಗೂ ಒಡಿಶಾ ತಂಡಗಳು ಗಳಿಸಿವೆ.
ನಾಳೆ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಒಡಿಶಾ ತಂಡ, ಎ ಗುಂಪಿನ ವಿಜೇತ ಪಶ್ಚಿಮ ಬಂಗಾಳವನ್ನು ಎದುರಿಸಲಿದ್ದರೆ, ದೆಹಲಿ ತಂಡ, ಮಣಿಪುರವನ್ನು ಎದುರಿಸಲಿದೆ. ಮೇಘಾಲಯ ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಶುಕ್ರವಾರ ಹಾಲಿ ಚಾಂಪಿಯನ್ ಸರ್ವಿಸಸ್ ಅನ್ನು ಎದುರಿಸಲಿದೆ. ಕೇರಳ, ೨೦೨೧-೨೨ರ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರವನ್ನು ಎದುರಿಸಲಿವೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್