ಬಳ್ಳಾರಿ, 21 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರಿಜಿಯವರ ದಿವ್ಯ ಸ್ಪೂರ್ತಿಯೊಂದಿಗೆ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರ ಗಂಗಾಮಾತಾ ಆಧ್ಯಾತ್ಮಿಕ ಪಿರಮಿಡ್ ಧ್ಯಾನ ಕೇಂದ್ರದ ಲೋಕಾರ್ಪಣೆ ಸಮಾರಂಭ ಹಾಗೂ ಮಹಾಕರುಣ ಸಸ್ಯಹಾರ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶಾಖ ವಿರಕ್ತಮಠ ನಿಯೋಜಿತ ಉತ್ತರಾಧಿಕಾರಿಗಳಾದ ಪರಮ ಪೂಜ್ಯಶ್ರೀ ಮರಿ ಕೊಟ್ಟೂರು ದೇಶಿಕರು ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ಕ್ಷೇತ್ರದ ಮಾಜಿ ಶಾಸಕರು ಹಾಗೂ ಯುವ ನಾಯಕರಾದ ಟಿ.ಹೆಚ್.ಸುರೇಶ್ ಬಾಬು, ಸಮಾಜ ಸೇವಕರಾದ ಎಸ್.ಬಿ.ಗಂಗಮ್ಮ, ಪಿರಮಿಡ್ ನ ಧ್ಯಾನ ಕೇಂದ್ರದ ಹಿರಿಯ ಮಾಸ್ಟರ್ ಗಳಾದ, ನಾಗರೆಡ್ಡಿ, ಹಂಪಣ್ಣ, ಹನುಮಂತ ರಾವ್, ಲಿಂಗನಗೌಡ, ಶಿವಕುಮಾರ್, ಮಂಜುನಾಥ ಹಿರಾಳ್, ಸಂಗನಕಲ್ಲು ಗೀತಾ, ಶ್ರೀಧರಗಡ್ಡೆ ಗ್ರಾಮದ ಪಿರಮಿಡ್ ಧ್ಯಾನ ಕೇಂದ್ರದ ಅಧ್ಯಕ್ಷರಾದ ಎರ್ರಿಸ್ವಾಮಿ, ಪಿರಮಿಡ್ ಧ್ಯಾನ ಕೇಂದ್ರದ ಎಲ್ಲಾ ಮಾಸ್ಟರ್ ಗಳು ಕೂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ