ಏ.29ಕ್ಕೆ ಮೋದಿ ಅನರ್ಹತೆ ಕೋರಿದ ಅರ್ಜಿ ವಿಚಾರಣೆ
ನವದೆಹಲಿ, 26 ಏಪ್ರಿಲ್ (ಹಿ.ಸ):ಆ್ಯಂಕರ್:ಹಿಂದೂ-ಸಿಖ್ ದೇವರುಗಳು ಮತ್ತು ಆರಾಧನಾ ಸ್ಥಳಗಳ ಹೆಸರಿನಲ್ಲಿ ಬಿಜೆಪಿಗೆ ಮತ
ಏ.29ಕ್ಕೆ ಮೋದಿ ಅನರ್ಹತೆ ಕೋರಿದ ಅರ್ಜಿ ವಿಚಾರಣೆ


ನವದೆಹಲಿ, 26 ಏಪ್ರಿಲ್ (ಹಿ.ಸ):ಆ್ಯಂಕರ್:ಹಿಂದೂ-ಸಿಖ್ ದೇವರುಗಳು ಮತ್ತು ಆರಾಧನಾ ಸ್ಥಳಗಳ ಹೆಸರಿನಲ್ಲಿ ಬಿಜೆಪಿಗೆ ಮತ ಕೇಳಿದ ಆರೋಪದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಆರು ವರ್ಷಗಳ ಕಾಲ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ .ಏ.29ರಂದು ವಿಚಾರಣೆ ನಡೆಸಲಿದೆ.

ವಕೀಲ ಆನಂದ್.ಎಸ್ ಜೊಂಧಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಆರು ವರ್ಷಗಳ ಕಾಲ ಪ್ರಧಾನಿ ನರೇಂದ್ರಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಏ.9ರಂದು ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ವಿರುದ್ಧ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿಗಳು ಹಿಂದೂ ಮತ್ತು ಸಿಖ್ ದೇವರುಗಳು ಮತ್ತು ಅವರ ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತಗಳನ್ನು ಕೇಳಿದ್ದಾರೆ. ಮಾತ್ರವಲ್ಲದೆ, ವಿರೋಧಿ ರಾಜಕೀಯ ಪಕ್ಷಗಳು ಮುಸ್ಲಿಮರ ಪರವಾದ ಒಲುವು ಹೊಂದಿದ್ದಾರೆ ಎಂದಿದ್ದಾರೆ. ರಾಮಮಂದಿರ ನಿರ್ಮಾಣ, ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅಭಿವೃದ್ಧಿ ಹಾಗೂ ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ನ ಪ್ರತಿಗಳನ್ನು ವಾಪಸ್ ತಂದಿರುವುದಾಗಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande