ದೆಹಲಿ ಬಳಿಕ ಅಹಮದಾಬಾದ್ ನ ಶಾಲೆಗಳಿಗೆ ಬಾಂಬ್ ಬೆದರಿಕೆ
ಅಹಮದಾಬಾದ್ , 6 ಮೇ (ಹಿ.ಸ):ಆ್ಯಂಕರ್:ದೆಹಲಿ ಬಳಿಕ ಅಹಮದಾಬಾದ್ನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
hmedabad Schools Receive Bom


ಅಹಮದಾಬಾದ್ , 6 ಮೇ (ಹಿ.ಸ):ಆ್ಯಂಕರ್:ದೆಹಲಿ ಬಳಿಕ ಅಹಮದಾಬಾದ್ನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ದೆಹಲಿಯ ಸುಮಾರು 100ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಇ-ಮೇಲ್ ಮೂಲಕ ಬಂದಿತ್ತು. ಪ್ರಾಥಮಿಕ ವರದಿಗಳ ಪ್ರಕಾರ, ಗುಜರಾತ್ನ ದೊಡ್ಡ ನಗರಗಳಲ್ಲಿ ಕನಿಷ್ಠ ಮೂರು ಶಾಲೆಗಳಿಗೆ ಇಮೇಲ್ ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎನ್ನಲಾಗಿದೆ.

ರಷ್ಯಾದ ಹ್ಯಾಂಡ್ಲರ್ ನಿಂದ ಈ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಇಮೇಲ್ ನಂತರ ಪೊಲೀಸರು ಅಲರ್ಟ್ ಆಗಿದ್ದು, ಶಾಲೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಪೊಲೀಸ್ ತಂಡಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತು ಪತ್ತೆಯಾಗಿಲ್ಲ. ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ.

ಮೇ 1 ರಂದು ದೆಹಲಿ, ನೋಯ್ಡಾದ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿದ್ದವು, ಇದು ಶಾಲಾ ಆಡಳಿತ, ಪೋಷಕರು ಮತ್ತು ಕಾನೂನು ಜಾರಿ ಅಧಿಕಾರಿಗಳಲ್ಲಿ ವ್ಯಾಪಕವಾದ ಭೀತಿಯನ್ನು ಸೃಷ್ಟಿಸಿತು. ಭದ್ರತಾ ತಂಡಗಳನ್ನು ವಿವಿಧ ಶಾಲೆಗಳಿಗೆ ಧಾವಿಸಲಾಯಿತು, ಅವರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಂತತೆಯನ್ನು ಕಾಪಾಡಿಕೊಂಡು ಅವರ ಆವರಣವನ್ನು ಪರಿಶೀಲಿಸಿದರು, ಆದಾಗ್ಯೂ, ನಂತರ ಬೆದರಿಕೆ ಸುಳ್ಳು ಎಂದು ತಿಳಿದುಬಂದಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande