ಸೂರತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಉಚ್ಛಾಟನೆ
ಸೂರತ್, 26 ಏಪ್ರಿಲ್ (ಹಿ.ಸ):ಆ್ಯಂಕರ್:ಗುಜರಾತ್ ನ ಸೂರತ್ ಲೋಕಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂ
k Sabha Election: Congress Suspends Surat Candi


ಸೂರತ್, 26 ಏಪ್ರಿಲ್ (ಹಿ.ಸ):ಆ್ಯಂಕರ್:ಗುಜರಾತ್ ನ ಸೂರತ್ ಲೋಕಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತಗೊಳ್ಳುತ್ತಿದ್ದಂತೆ ಪಕ್ಷವು ಅವರನ್ನು ಉಚ್ಛಾಟಿಸಿದೆ. ನೀಲೇಶ್ ಅವರ ನಾಮಪತ್ರ ರದ್ದಾದ ನಂತರ ಇತರೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದ ಬಳಿಕ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರನ್ನು ಅವರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವ ಕುರಿತು ಕಾಂಗ್ರೆಸ್ ಮಾತನಾಡಿತ್ತು.

ನೀಲೇಶ್ ಕುಂಭಾಣಿ ಬಗ್ಗೆಯೂ ಪಕ್ಷ ಕಟ್ಟುನಿಟ್ಟಿನ ನಿಲು ತಳೆದಿದೆ, ನೀಲೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿದೆ. ನೀಲೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಲು ಕಾಂಗ್ರೆಸ್ ಶಿಸ್ತು ಸಮಿತಿ ನಿರ್ಧರಿಸಿದೆ. ಸೂರತ್ ಕ್ಷೇತ್ರದಿಂದ ನಾಮಪತ್ರ ರದ್ದತಿಗೆ ನೀಲೇಶ್ ಕುಂಭಾಣಿ ಹೊಣೆಗಾರಿಕೆಯನ್ನು ಶಿಸ್ತು ಸಮಿತಿ ಹೊರಿಸಿದೆ.

ನಾಮಪತ್ರ ರದ್ದು ನಿಮ್ಮ ನಿರ್ಲಕ್ಷ್ಯ ಅಥವಾ ಬಿಜೆಪಿ ಜತೆಗಿನ ಒಡನಾಟವನ್ನು ತೋರಿಸುತ್ತದೆ ಎಂದು ಶಿಸ್ತು ಸಮಿತಿ ನಿರ್ಧಾರದಲ್ಲಿ ಹೇಳಿದೆ. ಇದರಿಂದಾಗಿ ಸೂರತ್ನ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ. ಸೂರತ್ ಕ್ಷೇತ್ರದಿಂದ ನಾಮಪತ್ರ ರದ್ದಾದ ಬಳಿಕ ನೀಲೇಶ್ ಕುಂಭಾಣಿ ಮಾಧ್ಯಮಗಳ ಮುಂದೆ ಬಂದಿಲ್ಲ, ಕಾಂಗ್ರೆಸ್ ನಾಯಕರು ಕೂಡ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

ಹಿಂದೂಸ್ತಾನ್ ಸಮಾಚಾರ್


 rajesh pande