ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್
ಕೊಪ್ಪಳ, 25 ಏಪ್ರಿಲ್ (ಹಿ.ಸ): ಆ್ಯಂಕರ್ : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲ
 ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್


 ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್


 ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್


 ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್


 ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್


 ಲೋಕಸಭಾ ಚುನಾವಣೆ: ಗಮನ ಸೆಳೆದ ಶತಾಯಿಷಿ ಮತದಾರರ ಹೋಮ್ ವೋಟಿಂಗ್


ಕೊಪ್ಪಳ, 25 ಏಪ್ರಿಲ್ (ಹಿ.ಸ):

ಆ್ಯಂಕರ್ : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇಂದು ನಡೆದ ಹೋಮ್ ವೋಟಿಂಗ್ ಮೂಲಕ ಶತಾಯಿಷಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಯುವ ಮತದಾರರಿಗೆ ಮಾದರಿಯಾಗಿದ್ದಾರೆ.

ಹೌದು 85 ವರ್ಷ ವಯೋಮಾನದ ಮತದಾರರಿಗೆ ಹಾಗೂ ವಿಕಲಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಅನುಕೂಲ ಕಲ್ಪಿಸಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಮತದಾರರ ಪೈಕಿ 12 ಡಿ ಮುಖಾಂತರ ಅರ್ಜಿ ಸಲ್ಲಿಸಿದ ಅರ್ಹ ಮತದಾರರಿಗೆ ಏ.25 ರಿಂದ ಏ.30 ರವರೆಗೆ ಮನೆಯಿಂದಲೇ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುರುವಾರದಂದು ಸಂಬಂಧಪಟ್ಟ ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ಸಮಕ್ಷಮದಲ್ಲಿ ಹೋಮ್ ವೋಟಿಂಗ್ ಕಾರ್ಯ ನಡೆಯಿತು.

*1952ರಿಂದ ಮತದಾನ ಹಕ್ಕು ಚಲಾಯಿಸುತ್ತಿರುವ ಕೊಪ್ಪಳದ ರಾಧಾಬಾಯಿ ಗಡಚಿಂತಿ:* ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದ ನಿವಾಸಿ 103 ವರ್ಷ ವಯೋಮಾನದ ರಾಧಾಬಾಯಿ ಗಡಚಿಂತಿ ಅವರು ತುಂಬಾ ಉತ್ಸಾಹದಿಂದ ಮನೆಯಿಂದಲೇ ಮತಚಲಾಯಿಸಿದರು. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಕ್ಸಿಜನ್ ಹಾಕಿಕೊಂಡು ಮತದಾನದಿಂದ ಹೊರಗುಳಿಯದೇ ವೋಟ್ ಮಾಡಿರುವುದು ಮತ್ತೊಂದು ವಿಶೇಷವಾಗಿತ್ತು. ಅಲ್ಲದೇ ಶತಾಯುಷಿ ರಾಧಾಬಾಯಿ ಗಡಚಿಂತಿ ಅವರು 1952 ರಿಂದ ನಮ್ಮ ದೇಶದಲ್ಲಿ ನಡೆದ ಲೋಕಸಭೆ, ವಿಧಾನಸಭಾ, ಪುರಸಭೆ, ನಗರಸಭೆ ಸೇರಿದಂತೆ ಇತರ ಸ್ಥಳೀಯ ಚುನಾವಣೆಗಳಲ್ಲಿ ಪಾಲ್ಗೊಂಡು ಸಂವಿಧಾನಬದ್ಧವಾದ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಿಳಿಸಿದ್ದು, ನಮ್ಮ ಮತ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

*ಶತಾಯುಷಿ ಮತದಾರರ ಉತ್ಸಾಹಕ್ಕೆ ಜಿಲ್ಲಾಧಿಕಾರಿಗಳಿಂದ ಮೆಚ್ಚುಗೆ:* ಹೋಮ್ ವೋಟಿಂಗ್ ಮೂಲಕ ನಡೆದ ಮತದಾನ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಭೇಟಿ ನೀಡಿ, ಕೊಪ್ಪಳ ನಗರದ ಶತಾಯುಷಿಗಳಾದ ರಾಧಾಬಾಯಿ ಗಡಚಿಂತಿ, ಕಲಾವತಿ ಹಾಗೂ ಮಾಬಮ್ಮ ಅವರ ಮತದಾನದ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತದಾನ ಎಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುವುದಕ್ಕೆ ಶತಾಯುಷಿ ಮತದಾರರು ಸಾಕ್ಷಿಯಾಗಿದ್ದಾರೆ. 85 ವರ್ಷ ವಯೋಮಾನದ ಮತದಾರರು ಹಾಗೂ ವಿಕಲಚೇತನ ಮತದಾರರು ಸಹ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

*ಹಕ್ಕು ಚಲಾಯಿಸಿದ 85 ವರ್ಷ ವಯೋಮಾನದ ಮತದಾರರು:* ಹೋಮ್ ವೋಟಿಂಗ್ ಮೂಲಕ ಗುರುವಾರದಂದು 85 ವರ್ಷ ವಯೋಮಾನದ ಮತದಾರರಾದ ಗಿರಿಜಮ್ಮ, ಜೈನಾಬಿ, ಹುಸೇನ್ ಬಿ, ಮೋದಿನಬೀ, ಕರಕವ್ವ, ಪ್ರಲ್ಹಾದ ಆಚಾರ್, ಸುಶಿಲೇಂದ್ರ ಆಚಾರ್, ದಿರೇಂದ್ರ ಆಚಾರ್, ಲಲಿತಾಬಾಯಿ, ಪದ್ಮಾವತಿ, ಸೀತಾಬಾಯಿ, ರಾಜುಬಾಯಿ, ಹನುಮಮ್ಮ, ನಾರಾಯಣರಾವ್ ಸೇರಿದಂತೆ ಮತ್ತಿತರರು ಮತದಾನದ ಹಕ್ಕು ಚಲಾಯಿಸಿದರು.

*ಮನೆಯಿಂದಲೇ ಮತದಾನಮಾಡಿದ ವಿಶೇಷ ಚೇತನರು:* ಹೋಮ್ ವೋಟಿಂಗ್ ಮೂಲಕ ಗುರುವಾರದಂದು ವಿಶೇಷ ಚೇತನರು ಮತದಾರರಾದ ಅಮೃತ್, ರಾಧಾಬಾಯಿ, ಗೌಸಿಯಾ ಬೇಗಂ, ಅಶ್ವಿನಿ, ಪುರುಶೋತ್ತಮ್ಮ ಸೇರಿದಂತೆ ಇತರ ವಿಶೇಷ ಚೇತನ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ತಹಶೀಲ್ದಾರ ವೀಠ್ಠಲ್ ಚೌಗಲಾ, ಸೆಕ್ಟರ್ ಅಧಿಕಾರಿ ವಿದ್ಯಾಧರ, ಪೆÇಲಿಂಗ್ ಅಧಿಕಾರಿ ಮಲ್ಲಪ್ಪ ಹಾಗೂ ಮರ್ದಾನ, ಬಿ.ಎಲ್.ಓ ಸುಜಾತಾ ಪಾಟೀಲ್ ಹಾಗೂ ರಾಮಣ್ಣ, ಜಿಲ್ಲಾ ಸ್ವೀಪ್ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮತ್ತು ವೆಂಕೋಬ, ನಗರಸಭೆ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


 rajesh pande