ಐಪಿಲ್ ಟಿ-೨೦ ಕ್ರಿಕೆಟ್ ಟೂರ್ನಿ,ಸನ್ ರೈಸರ್ಸ್ ಹೈದರಾಬಾದ್- ರಾಜಸ್ಥಾನ್ ರಾಯಲ್ಸ್ ಮುಖಾಮುಖಿ
ಹೈದರಾಬಾದ್, 2 ಮೇ (ಹಿ.ಸ):ಆ್ಯಂಕರ್: ಐಪಿಲ್ ಟಿ-೨೦ ಕ್ರಿಕೆಟ್ ಟೂರ್ನಿಯ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ


sfwefwere3ಹೈದರಾಬಾದ್, 2 ಮೇ (ಹಿ.ಸ):ಆ್ಯಂಕರ್:

ಐಪಿಲ್ ಟಿ-೨೦ ಕ್ರಿಕೆಟ್ ಟೂರ್ನಿಯ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈಸೂಪರ್ ಕಿಂಗ್ಸ್ ತಂಡವನ್ನು ೭ ವಿಕೆಟ್ಗಳಿಂದ ಮಣಿಸಿದೆ. ಚೆನ್ನೈ ತಂಡ ನೀಡಿದ್ದ ೧೬೩ ರನ್ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡ ಕೇವಲ ೧೭.೫ ಓವರ್ಗಳಲ್ಲಿ ಮೂರು ವಿಕೆಟ್ ನಷ್ಟದೊಂದಿಗೆ ಕ್ರಮಿಸಿ ಗೆಲುವು ಸಾಧಿಸಿತು. ಪಂಜಾಬ್ ಪರ ಜಾನಿ ಬೇರ್ಸ್ಟೋ ೪೬ ಹಾಗೂ ರೀಲೀ ರೋಸೌ ೪೩ ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಚೆನ್ನೈಸೂಪರ್ ಕಿಂಗ್ಸ್ ನಿಗದಿತ ೨೦ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೬೨ ರನ್ ಗಳಿಸಿತು. ಚೆನ್ನೈ ಪರ ನಾಯಕ ಋತುರಾಜ್ ಗಾಯಕ್ವಾಡ್ ೪೮ ಎಸೆತಗಳಲ್ಲಿ ೬೨ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು. ಆದರೆ ಪಂಜಾಬ್ ತಂಡದ ನಿಯಂತ್ರಿತ ಬೌಲಿಂಗ್ ಎದುರು ದೊಡ್ಡ ಗುರಿ ನೀಡುವಲ್ಲಿ ಚೆನ್ನೈ ವಿಫಲವಾಯಿತು. ಪಂಜಾಬ್ ಪರ ಹರ್ಪ್ರೀತ್ ಬ್ರಾರ್ ಹಾಗೂ ರಾಹುಲ್ ಚಹರ್ ತಲಾ ೨ ವಿಕೆಟ್ ಪಡೆದರು. ಇಂದು ಹೈದರಾಬಾದ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ ೭.೩೦ ಕ್ಕೆ ಆರಂಭವಾಗಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande