ಸಿಂಗಾಪುರದಲ್ಲಿ ಎವರೆಸ್ಟ್ ಫಿಶ್ ಕರಿ ಮಸಾಲೆ ದಿಢೀರ್ ನಿಷೇಧ
ಸಿಂಗಾಪುರ, 20 ಏಪ್ರಿಲ್ (ಹಿ.ಸ):ಆ್ಯಂಕರ್:ಎವರೆಸ್ಟ್ ಫಿಶ್ ಕರಿ ಮಸಾಲೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎವರೆಸ್ಟ್ ಫಿಶ
ಸಿಂಗಾಪುರ


ಸಿಂಗಾಪುರ, 20 ಏಪ್ರಿಲ್ (ಹಿ.ಸ):ಆ್ಯಂಕರ್:ಎವರೆಸ್ಟ್ ಫಿಶ್ ಕರಿ ಮಸಾಲೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎವರೆಸ್ಟ್ ಫಿಶ್ ಕರಿ ಮಸಾಲೆ ತನ್ನದೇಯಾದ ರುಚಿ, ಸ್ವಾದವನ್ನು ಹೊಂದಿದೆ. ಆದರೆ ಇದೀಗ ಎವರೆಸ್ಟ್ ಫಿಶ್ ಕರಿ ಮಸಾಲೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಫುಡ್ ಏಜೆನ್ಸಿ ಖಡಕ್ ಸೂಚನೆ ನೀಡಿದೆ.

ಹೌದು, ಎವರೆಸ್ಟ್ ಫಿಶ್ ಕರಿ ಮಸಾಲೆಯಲ್ಲಿ ಅತಿಯಾದ ಕೀಟನಾಶಕ ಪದಾರ್ಥವಿದ್ದು, ಇದು ಜನರು ಬಳಕೆ ಮಾಡುವ ಮಿತಿಗಿಂತ ಹೆಚ್ಚಾಗಿದೆ. ಈ ಬಗ್ಗೆ ಹಾಂಗ್ ಕಾಂಗ್ನ ಆಹಾರ ಸುರಕ್ಷತೆ ಕೇಂದ್ರವು ಎವರೆಸ್ಟ್ ಫಿಶ್ ಕರಿ ಮಸಾಲೆಯನ್ನು ಹಿಂಪಡೆಯುವ ಅಧಿಸೂಚನೆಯನ್ನು ಹೊರಡಿಸಿದೆ. ಮಾನವ ಬಳಕೆಗೆ ಯೋಗ್ಯವಲ್ಲದ ಮಟ್ಟದಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಸಂಸ್ಥೆ ಪತ್ತೆ ಮಾಡಿದೆ ಎಂದು ತಿಳಿಸಲಾಗಿದೆ. ಎವರೆಸ್ಟ್ ಫಿಶ್ ಮಸಾಲೆ ಭಾರತದಲ್ಲಿ ಪ್ರಖ್ಯಾತ ಪ್ರಾಡಕ್ಟ್ ಆಗಿದ್ದು, ಇಂದಿಗೂ ಬಹುತೇಕ ಜನರು ಅಡುಗೆ ಮನೆಯಲ್ಲಿ ಇದನ್ನು ಬಳಸುತ್ತಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande