ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಮಾರಾಟ
ಬೆಂಗಳೂರು, 20 ಏಪ್ರಿಲ್ (ಹಿ.ಸ):ಆ್ಯಂಕರ್:ರಾಜಾಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾ
Bengaluru News In Kannada Huge Dema


ಬೆಂಗಳೂರು, 20 ಏಪ್ರಿಲ್ (ಹಿ.ಸ):ಆ್ಯಂಕರ್:ರಾಜಾಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ ಜನರು ಮೊಸರು, ಮಜ್ಜಿಗೆ ತೆಗದುಕೊಳ್ಳಲು ಹೆಚ್ಚು ಮುಂದಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಬಿಸಿಲಿನ ತಾಪ ತಾಳಲಾರದೆ ಬೆಂಗಳೂರು ಮಂದಿ ತಂಪು ಪಾನಿಯಗಳತ್ತ ಮುಖ ಮಾಡುತ್ತಿದ್ದಾರೆ. ಹಣ್ಣಿನ ಜ್ಯೂಸ್ಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್ನ ನಂದಿನಿ ಮೊಸರು, ಮಜ್ಜಿಗೆ, ಐಸ್ ಕ್ರೀಮ್ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಒಂದೇ ದಿನ ಬೆಂಗಳೂರಿನಲ್ಲಿ 16 ಲಕ್ಷ ಲೀಟರ್ ಮೊಸರು ಮಾರಾಟವಾಗಿದ್ದು, ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.

ಕೆಎಂಎಫ್ ಮೊದಲು ಪ್ರತಿದಿನ 42 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿತ್ತು. ಆದರೆ ಈ ವರ್ಷ 47 ಲಕ್ಷ ಲೀಟರ್ನಷ್ಟು ಹಾಲು ಮಾರಾಟವಾಗುತ್ತಿದೆ. ಇನ್ನು ಮೊಸರು ಮೊದಲು ಪ್ರತಿದಿನ 10 ಲಕ್ಷ ಲೀಟರ್ನಷ್ಟು ಮಾರಾಟವಾಗುತ್ತಿತ್ತು. ಆದರೆ ಈ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕಳೆದ ಎರಡು ತಿಂಗಳಿನಿಂದ ನಂದಿನಿ ಮೊಸರಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಏಪ್ರಿಲ್ 6ನೇ ತಾರೀಖಿನಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ. ಆದರೆ ರಾಮನವಮಿಯ ದಿನದಂದು ಈ ದಾಖಲೆ ಮುರಿದಿದ್ದು, ಒಟ್ಟು 16 ಲಕ್ಷ ಲೀಟರ್ದಷ್ಟು ಮೊಸರು ಮಾರಾಟವಾಗಿದೆ. ಕೆಎಂಎಫ್ ಇತಿಹಾಸದಲ್ಲೆ ಇದು ದಾಖಾಲೆಯ ಮಾರಟವಾಗಿದೆ.

ಈ ಹಿಂದೆ ಮಜ್ಜಿಗೆ ಹಾಗೂ ಲಸ್ಸಿ ಪ್ರತಿದಿನ 1.10 ಲಕ್ಷ ಲೀಟರ್ ನಷ್ಟು ಮಾರಾಟ ಆಗುತ್ತಿತ್ತು. ಆದರೆ ಈ ವರ್ಷ ಒಂದೂವರೆ ಲಕ್ಷ ಲೀಟರ್ನಷ್ಟು ಮಾರಾಟವಾಗುತ್ತಿದೆ. ಇನ್ನು, ಐಸ್ ಕ್ರೀಮ್ ಶೇ 36 ರಷ್ಟು ಮಾರಾಟವಾಗುತ್ತಿದ್ದು, ಒಟ್ಟು 16 ಸಾವಿರ ಲೀಟರ್ ಮಾರಾಟ ಆಗಿತ್ತು. ಈ ವರ್ಷದ ಬೇಸಿಗೆಯಲ್ಲಿ ಒಟ್ಟು 25,439 ಲೀಟರ್ ಐಸ್ ಕ್ರೀಮ್ ಮಾರಾಟವಾಗಿದ್ದು, ಕೆಎಂಎಫ್ ಭರ್ಜರಿ ಲಾಭವನ್ನು ಪಡೆಯುತ್ತಿದೆ. ಈ ಬಿಸಿಲು ಹೀಗೆ ಮುಂದುವರಿದರೇ ಇನ್ನು ಹೆಚ್ಚು ನಂದಿನಿ ಉತ್ಪನ್ನಗಳು ಮಾರಾಟ ಆಗುವ ಸಾಧ್ಯತೆ ಇದ್ದು, ಎಲ್ಲಿಯೂ ಕೊರತೆಯಾಗದಂತೆ ನಂದಿನಿ ಉತ್ಪನ್ನಗಳನ್ನ ಪೂರೈಕೆ ಮಾಡಲು ಇಲಾಖೆ ಮುಂದಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande