ಗಾಳಿಪಟ ಉತ್ಸವ
ಕೋಲಾರ, ೧೯ ಏಪ್ರಿಲ್ (ಹಿ.ಸ) : ಆ್ಯಂಕರ್ : ಮತದಾನ ಜಾಗೃತಿ ಅಭಿಯಾನದ (ಸ್ವೀಪ್) ಮೂಲ ಉದ್ದೇಶ ಮತದಾನದ ಬಗ್ಗೆ ಅರಿವು
ಮತದಾನ ಜಾಗೃತಿ ಅಭಿಯಾನದ (ಸ್ವೀಪ್) ಮೂಲ ಉದ್ದೇಶ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾರರನ್ನು ಜಾಗೃತಗೊಳಿಸುವುದು.


ಕೋಲಾರ, ೧೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ಮತದಾನ ಜಾಗೃತಿ ಅಭಿಯಾನದ (ಸ್ವೀಪ್) ಮೂಲ ಉದ್ದೇಶ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾರರನ್ನು ಜಾಗೃತಗೊಳಿಸುವುದು. ಆಗಿದೆ ಕೋಲಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮುಳಬಾಗಿಲು ತಾಲ್ಲೂಕು ಆಡಳಿತ ವತಿಯಿಂದ ಹೊರವಲಯದ ಬಾಲಾಜಿ ಭವನ್ ಮೈದಾನದಲ್ಲಿ ಗಾಳಿಪಟ ಹಾರಿಸುವ ಮೂಲಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಮತದಾನ ಜಾಗೃತಿ ಕರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ತ್ರೀ-ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು, ಪುರಸಭೆ, ಗ್ರಾಮ ಪಂಚಾಯಿತಿ, ನರೇಗಾ ಸಿಬ್ಬಂದಿ ಹೀಗೆ ಎಲ್ಲರ ಸಹಯೋಗದೊಂದಿಗೆ ಕರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕರ್ಯನರ್ವಹಣಾಧಿಕಾರಿ ಪದ್ಮ ಬಸಂತಪ್ಪ ಅವರು ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಓಖಒಐ ಹಾಗೂ ಸ್ತ್ರೀ-ಶಕ್ತಿ ಸ್ವ-ಸಹಾಯ ಸಂಘಗಳ ಮೂಲಕ ನಾವು ಮತದಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಹೀಗಾಗಿ ಎಲ್ಲಾ ಮಹಿಳೆಯರು ಮತದಾನದ ಬಗ್ಗೆ ಜಾಗೃತಿಯನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಮತದಾನ ಮಾಡುವಂತೆ ಅವರಲ್ಲಿ ಪ್ರೇರೇಪಿಸಲಾಗುತ್ತದೆ ಎಂದು ಓಖಐಒ ನ ತಾಲ್ಲೂಕು ವ್ಯವಸ್ಥಾಪಕರಾದ ಪುಷ್ಪಲತಾ ಅವರು ತಿಳಿಸಿದರು.

ನಾವು ಸ್ತ್ರೀ-ಶಕ್ತಿ ಮಹಿಳಾ ಸಂಘದಲ್ಲಿ ಕರ್ಯನರ್ವಹಿಸುತ್ತಿದ್ದು ನಮ್ಮ ಎಲ್ಲಾ ಸಂಘದ ಸದಸ್ಯರು ಕೈಗಳಿಗೆ ಮೆಂದಿಯನ್ನು ಹಾಕಿಕೊಳ್ಳುವುದರ ಮೂಲಕ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಸ್ವ-ಸಹಾಯ ಸಂಘದ ಸದಸ್ಯ ವೀಣಾ ಅವರು ತಿಳಿಸಿದರು.

ಚಿತ್ರ : ಮತದಾನ ಜಾಗೃತಿ ಅಭಿಯಾನದ (ಸ್ವೀಪ್) ಮೂಲ ಉದ್ದೇಶ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾರರನ್ನು ಜಾಗೃತಗೊಳಿಸುವುದು.


 rajesh pande