ಕೂಸಿನ ಮನೆ ಸೌಲಭ್ಯ ಪಡೆಯಲು ಸಲಹೆ
ರಾಯಚೂರು,, 19 ಏಪ್ರಿಲ್ (ಹಿ.ಸ): ಆ್ಯಂಕರ್: ರಾಯಚೂರು ತಾಲೂಕಿನ ವ್ಯಾಪ್ತಿಯ ಚಂದ್ರಬಂಡ ಗ್ರಾಮ ಪಂಚಾಯತಿಗೆ ಏ.19ರ (ಶ
  ಕೂಸಿನ ಮನೆ ಸೌಲಭ್ಯ ಪಡೆಯಲು ಸಲಹೆ - ರಾಹುಲ್ ತುಕಾರಾಮ ಪಾಂಡ್ವೆ


  ಕೂಸಿನ ಮನೆ ಸೌಲಭ್ಯ ಪಡೆಯಲು ಸಲಹೆ - ರಾಹುಲ್ ತುಕಾರಾಮ ಪಾಂಡ್ವೆ


  ಕೂಸಿನ ಮನೆ ಸೌಲಭ್ಯ ಪಡೆಯಲು ಸಲಹೆ - ರಾಹುಲ್ ತುಕಾರಾಮ ಪಾಂಡ್ವೆ


ರಾಯಚೂರು,, 19 ಏಪ್ರಿಲ್ (ಹಿ.ಸ):

ಆ್ಯಂಕರ್: ರಾಯಚೂರು ತಾಲೂಕಿನ ವ್ಯಾಪ್ತಿಯ ಚಂದ್ರಬಂಡ ಗ್ರಾಮ ಪಂಚಾಯತಿಗೆ ಏ.19ರ (ಶುಕ್ರವಾರ) ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ರವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ತಾಲೂಕಿನ ಚಂದ್ರಬಂಡ ಗ್ರಾಮ ಪಂಚಾಯತಿಯ ನಲ್ಲೋನಿಕುಂಟ ಕೆರೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರು ಕೆಲಸ ನಿರ್ವಹಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ಮಾಡಿದರು. ನಂತರ ಅವರು ತಾ.ಪಂ ಇ.ಒ ರವರೊಂದಿಗೆ ಮಾತನಾಡಿ, ಕಾಮಗಾರಿ ಸ್ಥಳದಲ್ಲಿ ಒದಗಿಸಿರುವ ಕುಡಿಯುವ ನೀರು, ನೆರಳಿನ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿದರು.

ನಂತರ ಮಹಿಳಾ ಕೂಲಿಕಾರರೊಂದಿಗೆ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಕೂಲಿಕಾರರ ಮಕ್ಕಳ ರಕ್ಷಣೆಗಾಗಿ ಗ್ರಾ.ಪಂ ಹಂತದಲ್ಲಿ ಶಿಶುಪಾಲನಾ ಕೇಂದ್ರ ಕೂಸಿನ ಮನೆ ತೆರೆಯಲಾಗಿದೆ ಅದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ನಂತರ ಕೆರೆ ಕಾಮಗಾರಿಯ ಕಡತದ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಎಲ್ಲಾ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಬೇಕು ಮತ್ತು ಎನ್ಎನ್ಆರ್ ಗಳ ಸೇವ್ ಮಾಡುವಲ್ಲಿ ವಿಳಂಭವಾಗಬಾರದು ಅದೇ ರೀತಿಯಾಗಿ ಕೂಲಿಕಾರರ ಹಾಜರಾತಿ ಎನ್.ಎಮ್.ಎಮ್.ಎಸ್ ಆ್ಯಪ್ ನಲ್ಲಿ ತೆಗೆದುಕೊಂಡು ಶೇ 100% ರಷ್ಟು ಪ್ರಗತಿ ಸಾಧಿಸುವಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ : ಐಎಎಸ್ ಪ್ರಭೇಷನರಿ ಸಾಹಿತ್ಯ ಆಲದಕಟ್ಟಿ, ಕಾರ್ಯನಿರ್ವಾಹಕ ಅಧಿಕಾರಿಗಳು ಮಾನಪ್ಪ ಕಟ್ಟಿಮನಿ, ಸಹಾಯಕ ನಿರ್ದೇಶಕ ಹನುಮಂತ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೈನುದ್ಧೀನ್ , ಜಿಲ್ಲಾ ಐಇಸಿ ಸಂಯೋಜಕರು, ತಾಲೂಕ ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಿಬ್ಬಂದಿಯವರು, ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


 rajesh pande