ಏ.22ರಂದು ಆರ್ಚರಿ, ಫೆನ್ಸಿಂಗ್, ಬಾಕ್ಸಿಂಗ್ ಕ್ರೀಡೆಯ ಆಯ್ಕೆ ಪ್ರಕ್ರಿಯೆ
ರಾಯಚೂರು,, 19 ಏಪ್ರಿಲ್ (ಹಿ.ಸ): ಆ್ಯಂಕರ್: ಹಳಿಯಾಳ ಸಂತೇಮರಳ್ಳಿ ಹಾಗೂ ವಿದ್ಯಾನಗರ ಕ್ರೀಡಾಶಾಲೆ/ವಸತಿ ನಿಲಯಗಳಿಗೆ
ಏ.22ರಂದು ಆರ್ಚರಿ, ಫೆನ್ಸಿಂಗ್, ಬಾಕ್ಸಿಂಗ್ ಕ್ರೀಡೆಯ ಆಯ್ಕೆ ಪ್ರಕ್ರಿಯೆ


ರಾಯಚೂರು,, 19 ಏಪ್ರಿಲ್ (ಹಿ.ಸ):

ಆ್ಯಂಕರ್: ಹಳಿಯಾಳ ಸಂತೇಮರಳ್ಳಿ ಹಾಗೂ ವಿದ್ಯಾನಗರ ಕ್ರೀಡಾಶಾಲೆ/ವಸತಿ ನಿಲಯಗಳಿಗೆ ಆರ್ಚರಿ, ಫೆನ್ಸಿಂಗ್, ಬಾಕ್ಸಿಂಗ್ ಕ್ರೀಡೆಗೆ ಸಂಬಂಧಿಸಿದಂತೆ ಸಿದ್ಧಿ ಜನಾಂಗದ ಕ್ರೀಡಾಪಟುಗಳೊಂದಿಗೆ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಏ.22 ರಂದು 8ನೇ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆರ್ಚರಿ, ಫೆನ್ಸಿಂಗ್(ಬಾಲಕರಿಗೆ ಮಾತ್ರ) ಹಾಗೂ ಬಾಕ್ಸಿಂಗ್ (ಬಾಲಕ ಹಾಗೂ ಬಾಲಕಿಯರಿಗೆ) ಸ್ಪರ್ಧೆಗಳಿಗೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಜಿಲ್ಲೆಯ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿರುತ್ತದೆ. ಆಯ್ಕೆಯಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ತಪ್ಪದೇ ತಮ್ಮ ಜನ್ಮ ದಿನಾಂಕ ಹೊಂದಿರುವ ಆಧಾರ್ ಕಾರ್ಡ್, ಶಾಲಾ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಆಯ್ಕೆ ಸಮಯದಲ್ಲಿ ಸಲ್ಲಿಸತಕ್ಕದ್ದು. ಆಯ್ಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ದಿನಭತ್ಯೆ ನೀಡಲಾಗುವುದಿಲ್ಲ.


 rajesh pande