ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ
ರಾಯಚೂರು,, 19 ಏಪ್ರಿಲ್ (ಹಿ.ಸ): ಆ್ಯಂಕರ್: ಲೋಕಸಭೆ ಚುನಾವಣೆ-2024ರ ಹಿನ್ನಲೆಯಲ್ಲಿ ಏ.19ರ(ಶುಕ್ರವಾರ)ದಂದು ಒಟ್ಟು
  ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ

  ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ

  ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ

  ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ

  ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ

  ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳ ಸಲ್ಲಿಕೆ

ರಾಯಚೂರು,, 19 ಏಪ್ರಿಲ್ (ಹಿ.ಸ):

ಆ್ಯಂಕರ್: ಲೋಕಸಭೆ ಚುನಾವಣೆ-2024ರ ಹಿನ್ನಲೆಯಲ್ಲಿ ಏ.19ರ(ಶುಕ್ರವಾರ)ದಂದು ಒಟ್ಟು ಆರು ಅಭ್ಯರ್ಥಿಗಳಿಂದ ಒಟ್ಟು ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 11 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಏ.19ರಂದು ಪಕ್ಷೇತರ ಅಭ್ಯರ್ಥಿಯಾಗಿ ಯಲ್ಲಮ್ಮ ಬಸವರಾಜ್ ಅವರು ನಾಮಪತ್ರವನ್ನು ಸಲ್ಲಿಸಿದರು. ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ಶಾಮ್ರಾವ್ ಮೇದಾರ ತಂದೆ ಬಾಬುರಾವ್ ಮೇದಾರ್ ಅವರು ನಾಮಪತ್ರ ಸಲ್ಲಿಸಿದರು. ಭಾರತೀಯ ಜನತಾ ಪಾರ್ಟಿಯಿಂದ ರಾಜಾ ಅಮರೇಶ್ವರ ನಾಯಕ ತಂದೆ ರಾಜಾ ನರಸಿಂಹ ನಾಯಕ ಅವರು ನಾಮಪತ್ರವನ್ನು ಸಲ್ಲಿಸಿದ್ದು, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ತಂದೆ ಬಸಲಿಂಗಪ್ಪ ಅವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು, ಪಕ್ಷೇತರ ಅಬ್ಯರ್ಥಿಯಾಗಿ ಕೆ.ದೇವಣ್ಣ ನಾಯಕ ತಂದೆ ದುಳ್ಳಯ್ಯ ನಾಯಕ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಹಾಗೂ ಬಹುಜನ ಸಮಾಜ ಪಾರ್ಟಿಯಿಂದ ನರಸಣ್ಣಗೌಡ ಹೊಸಮನಿ ತಂದೆ ಶಿವಣ್ಣ ಹೊಸಮನಿ ಅವರು ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರೊಭೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ ಆಲದಕಟ್ಟಿ, ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರ ಸೂಚಕರು ಉಪಸ್ಥಿತರಿದ್ದರು.

ಏ.19 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಏ.20 ನಾಮಪತ್ರಗಳನ್ನು ಪರಿಶೀಲಿಸುವ ಕೊನೆಯ ದಿನಾಂಕವಾಗಿದ್ದು, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ 22 ಕೊನೆಯ ದಿನಾಂಕವಾಗಿದ್ದು, ಮೇ.7 ಲೋಕಸಭೆ ಚುನಾವಣೆ-2024ರ ಮತದಾನ ಪ್ರಕ್ರಿಯೆ ನಡೆಯಲಿದೆ. ಜೂ.4 ಮತೆ ಎಣಿಕೆ ಪ್ರಕ್ರಿಯೆ ನಡೆಯಲಿದೆ.

 rajesh pande