ಹಿಮಾಚಲದಲ್ಲಿರುವ ಭಾರತದ ಮೊದಲ ಹಳ್ಳಿಗೆ ಸಿಕ್ಕಿತು ದೂರಸಂಪರ್ಕ ಜಾಲ
ನವದಹೆಲಿ, 18 ಏಪ್ರಿಲ್ (ಹಿ.ಸ):ಆ್ಯಂಕರ್ :ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ಈಗ ದ
ಹಿಮಾಚಲದಲ್ಲಿರುವ ಭಾರತದ ಮೊದಲ ಹಳ್ಳಿಗೆ ಸಿಕ್ಕಿತು ದೂರಸಂಪರ್ಕ ಜಾಲ


ನವದಹೆಲಿ, 18 ಏಪ್ರಿಲ್ (ಹಿ.ಸ):ಆ್ಯಂಕರ್ :ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ಈಗ ದೂರಸಂಪರ್ಕ ಜಾಲ ತಲುಪಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪೀತಿ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 14,931 ಅಡಿ ಎತ್ತರದಲ್ಲಿ ಈ ಹಳ್ಳಿಗಳಿವೆ. ಲಾಹೋಲ್ ಸ್ಪೀತಿ ಜಿಲ್ಲೆಯಲ್ಲಿನ ಭಾರತದ ಮೊದಲ ಹಳ್ಳಿಗಳಾದ ಕೌರಿಕ್ ಮತ್ತು ಗುಯೇಗೆ ಟೆಲಿಕಾಂ ಸಂಪರ್ಕ( ಕನೆಕ್ಟಿವಿಟಿ) ಸಿಕ್ಕಿರುವ ಸಂಗತಿಯಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ಕೌರಿಕ್ ಎಂಬ ಹಳ್ಳಿಯು ಟಿಬೆಟ್ ಗಡಿ ಭಾಗದ ಸಮೀಪ ಇದೆ. ಸ್ಪೀತಿ ನದಿಯನ್ನು ತಲುಪುವ ಪರಂಗ್ ಅರ್ಥಾತ್ ಪರೆ ಚು ನದಿಯ ಕಣಿವೆಯಲ್ಲಿ ಈ ಹಳ್ಳಿ ಇದೆ.

ಇನ್ನು, ಗುಯೆ ಗ್ರಾಮವು ಸ್ಪೀತಿ ನದಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಚೀನಾದ ಗಡಿಭಾಗದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಗುಯೇ ಗ್ರಾಮ ಇದೆ. ಪ್ರಖ್ಯಾತ ಟಾಬೋ ಮಾನಸ್ಟರಿಯಿಂದ 40 ಕಿಮೀ ದೂರದಲ್ಲಿ ಇದು ಇರುವುದು.

ಹಿಂದೂಸ್ತಾನ್ ಸಮಾಚಾರ್


 rajesh pande