ವಿಶ್ವ ಹಿಮೋಫಿಲಿಯಾ ದಿನ,ಈ ರೋಗ ಬರುವುದು ಯಾಕೆ?, ತಡೆಗಟ್ಟುವುದು ಹೇಗೆ?
ನವದೆಹಲಿ, 17 ಏಪ್ರಿಲ್ (ಹಿ.ಸ): ಆ್ಯಂಕರ್ :ವಿಶ್ವ ಹಿಮೋಫಿಲಿಯಾ ಸಂಘಟನೆಯ (ಡಬ್ಲ್ಯು ಎಫ್ ಎಚ್) ಸಂಸ್ಥಾಪಕರಾದ ಫ್ರ್ಯಾ
ರಕ


ನವದೆಹಲಿ, 17 ಏಪ್ರಿಲ್ (ಹಿ.ಸ): ಆ್ಯಂಕರ್ :ವಿಶ್ವ ಹಿಮೋಫಿಲಿಯಾ ಸಂಘಟನೆಯ (ಡಬ್ಲ್ಯು ಎಫ್ ಎಚ್) ಸಂಸ್ಥಾಪಕರಾದ ಫ್ರ್ಯಾಂಕ್ ಸ್ಕಾನ್ಬೆಲ್ ಅವರ ಸ್ಮರಣೆಯೊಂದಿಗೆ ವಿಶ್ವ ಹಿಮೋಫಿಲಿಯಾ ದಿನವನ್ನು ಏಪ್ರಿಲ್ 17ರಂದು ಹಮ್ಮಿಕೊಳ್ಳಲಾಗುತ್ತದೆ. 1989ರಿಂದ ಈ ದಿನದ ಆಚರಣೆ ಆರಂಭವಾಗಿದ್ದು, ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಆಶಯ ಈ ದಿನದ್ದು.ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ʼವಿಶ್ವ ಹಿಮೋಫಿಲಿಯಾ ದಿನʼವನ್ನು ಆಚರಿಸಲಾಗುತ್ತದೆ. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

'ಹೈಮೊ' ಎಂಬ ಗ್ರೀಕ್ ಪದದಿಂದ ಹುಟ್ಟಿಕೊಂಡ ಈ ಶಬ್ದಕ್ಕೆ ʼರಕ್ತʼ ಎಂಬ ಅರ್ಥವಿದೆ ಮತ್ತು 'ಫೀಲಿಯಾ' ಎಂದರೆ ಪ್ರೀತಿ ಎಂದರ್ಥ. ರಕ್ತವನ್ನು ಪ್ರೀತಿಸಬೇಕು ಎಂಬರ್ಥವನ್ನು ನೀಡುವುದರಿಂದ ʼಹಿಮೋಫಿಲಿಯಾʼ ಎಂದು ಆಂಗ್ಲಭಾಷೆಯಲ್ಲಿ ಕರೆಯಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ ʼಕುಸುಮ ರೋಗʼ ಎಂಬ ಹೆಸರಿದೆ.

ಹಿಮೋಫಿಲಿಯಾದಲ್ಲಿ ಎ, ಬಿ, ಸಿ ಎಂಬ ಮೂರು ವಿಧಗಳಿವೆ. ರಕ್ತ ಹೆಪ್ಪುಗಟ್ಟಲು ನೆರವಾಗುವ 13 ಘಟಕಗಳಲ್ಲಿ (ಫ್ಯಾಕ್ಟರ್ಗಳಲ್ಲಿ) 8ನೇ ಘಟಕ ಕಡಿಮೆ ಇದ್ದರೆ ಅದನ್ನು ʼಟೈಪ್ ಎʼ ಎಂದು, 9ನೇ ಘಟಕ ಕಡಿಮೆ ಇದ್ದರೆ ʼಟೈಪ್ ಬಿʼ ಎಂದು ಕರೆಯಲಾಗುತ್ತದೆ. ಟೈಪ್ ಎ ಹಿಮೋಫಿಲಿಯಾ ಪ್ರಮಾಣ ಹೆಚ್ಚು. ಬಿ ಮತ್ತು ಸಿ ಹಿಮೋಫಿಲಿಯಾ ಕಾಯಿಲೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆಗೆ ತಕ್ಕಂತೆ ಸೌಮ್ಯ ಹಿಮೋಫಿಲಿಯಾ, ಸಾಧಾರಣ ಹಿಮೋಫಿಲಿಯಾ ಮತ್ತು ತೀವ್ರ ಹಿಮೋಫಿಲಿಯಾ ಎಂದು ವಿಂಗಡಿಸಲಾಗುತ್ತದೆ.

ಹಿಮೋಫಿಲಿಯಾ ಬರಲು ಕಾರಣವೇನು?:

ಹಿಮೋಫಿಲಿಯಾ ಒಂದು ಆನುವಂಶಿಕ ಕಾಯಿಲೆಯಾಗಿದ್ದು, ಅದು ರಕ್ತಸ್ರಾವದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಇದು ಪೋಷಕರಿಂದ ಬರುವ ಆನುವಂಶಿಕ ರೋಗವಾಗಿದೆ. ಕೆಲವೊಮ್ಮೆ ರೋಗವು ಆನುವಂಶಿಕ ರೂಪಾಂತರದ ಪರಿಣಾಮವಾಗಿ ಸಂಭವಿಸಬಹುದು. ಈ ಸಮಸ್ಯೆಯು ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳಲ್ಲಿ ಅಂದರೆ ಪ್ರೋಟೀನ್ ಕಡಿಮೆ ಇರುವವರಲ್ಲಿಯೂ ಈ ರೋಗ ಕಂಡು ಬರುತ್ತದೆ. ಕೆಲವರು ಅದರೊಂದಿಗೆ ಹುಟ್ಟುತ್ತಾರೆ. ಇನ್ನು ಕೆಲವರಲ್ಲಿ ಹಿಮೋಫಿಲಿಯಾ ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ. ಇದು ಪುರುಷರಲ್ಲಿ ಹೆಚ್ಚು ಸಾಮಾನ್ಯ ಎಂಬಂತಾಗಿದೆ ಎನ್ನುತ್ತಿವೆ ಬಹಳಷ್ಟು ಅಧ್ಯಯನಗಳು.

ಹಿಮೋಫಿಲಿಯಾದಲ್ಲಿ ಎರಡು ವಿಧ: ಹಿಮೋಫಿಲಿಯಾ - ಎ: ಇದು ಸಾಮಾನ್ಯ ರಕ್ತಸ್ರಾವದ ಕಾಯಿಲೆಯಾಗಿದೆ. ಇದು ಹೆಪ್ಪುಗಟ್ಟುವಿಕೆ ಅಂಶ ಪ್ರೋಟೀನ್-8 ಕಡಿಮೆ ಮಟ್ಟದ ಹೊಂದಿರುವವರಲ್ಲಿ ಸಮಾನ್ಯವಾಗಿ ಕಂಡು ಬರುತ್ತದೆ.

ಹಿಮೋಫಿಲಿಯಾ-ಬಿ: ಇದು ಅಪರೂಪದ, ಅಪಾಯಕಾರಿ ಕಾಯಿಲೆಯಾಗಿದೆ. ಹಿಮೋಫಿಲಿಯಾ-ಬಿ ವಿಶ್ವಾದ್ಯಂತ ಕಾಮನ್ ಕಾಯಿಲೆಯಾಗಿದೆ. ಕಡಿಮೆ ರಕ್ತ ಹೆಪ್ಪುಗಟ್ಟುವಿಕೆ ಅಂಶ ಪ್ರೋಟೀನ್-9 ಹೊಂದಿರುವ ಜನರಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ.

ಹಿಮೋಫಿಲಿಯಾ ಲಕ್ಷಣಗಳು:

ರಕ್ತ ಹೆಪ್ಪುಗಟ್ಟುವಿಕೆ ಕೊರತೆ ಅಥವಾ ಈ ಪ್ರಕ್ರಿಯೆ ಕಂಡು ಬರದೇ ಇರುವುದು

ಸಣ್ಣ ಗಾಯದಿಂದಲೂ ತೀವ್ರ ರಕ್ತಸ್ರಾವ, ಕೆಲವೊಮ್ಮೆ ನಿಲ್ಲದ ರಕ್ತಸ್ರಾವ

ಶಸ್ತ್ರಚಿಕಿತ್ಸೆ ಸಮಯದಲ್ಲಿ ಅತಿಯಾದ ರಕ್ತಸ್ರಾವ

ಮುಟ್ಟಿನ ಸಮಯದಲ್ಲಿ ಭಾರಿ ರಕ್ತಸ್ರಾವ

ದೇಹದ ಮೇಲೆ ನೀಲಿ ಕಲೆಗಳು

ಮೂತ್ರ ಅಥವಾ ಮಲದಲ್ಲಿ ರಕ್ತ

ಗರ್ಭಾವಸ್ಥೆಯಲ್ಲಿ ಅಸಹಜ ರಕ್ತಸ್ರಾವ

ಮೂಗಿನಿಂದಲೂ ಉಂಟಾಗುವ ರಕ್ತಸ್ರಾವ

ಮೆದುಳು ಮತ್ತು ಹೃದಯದಂತಹ ಪ್ರಮುಖ ಆಂತರಿಕ ಅಂಗಗಳು ಮತ್ತು ಅಂಗಾಂಶಗಳಲ್ಲಿ ರಕ್ತಸ್ರಾವ

ಒಸಡುಗಳಲ್ಲಿ ಕಂಡು ಬರುವ ರಕ್ತಸ್ರಾವ

ಕೀಲುಗಳಲ್ಲಿ ನೋವು ಅಥವಾ ಊತ

ದೀರ್ಘಕಾಲದ ತಲೆನೋವು, ನಿದ್ರಾಹೀನತೆ ಸಮಸ್ಯೆಗಳು

ದೃಷ್ಟಿ ಸಮಸ್ಯೆಗಳು

ಆಗಾಗ್ಗೆ ವಾಂತಿ ಕಂಡು ಬರುವುದು

ಹಿಂದೂಸ್ತಾನ್ ಸಮಾಚಾರ್


 rajesh pande