ವಿಮಾನದಲ್ಲಿ ಕುಳಿತು ಟ್ಯಾಬ್ಲೆಟ್ ಮೂಲಕ ರಾಮನ ಮೇಲೆ ಸೂರ್ಯ ರಶ್ಮಿ ವೀಕ್ಷಿಸಿದ ಮೋದಿ
ನಲ್ಬರಿ, 17 ಏಪ್ರಿಲ್ (ಹಿ.ಸ): ಆ್ಯಂಕರ್ : ಇಂದು ರಾಮಮಂದಿರ ನಿರ್ಮಾಣವಾಗಿ ಮೊದಲು ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿ
ನಲ್ಬರಿ


ನಲ್ಬರಿ, 17 ಏಪ್ರಿಲ್ (ಹಿ.ಸ): ಆ್ಯಂಕರ್ :

ಇಂದು ರಾಮಮಂದಿರ ನಿರ್ಮಾಣವಾಗಿ ಮೊದಲು ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕ್ಷಣವನ್ನು ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡರು. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಕ್ಷಣವನ್ನು ವಿಮಾನದಲ್ಲೇ ಕೂತು ವೀಕ್ಷಿಸಿದರು.

ಅಸ್ಸಾಂನ ನಲ್ಬರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮನವಮಿ ಹಬ್ಬದ ಸಮಾರಂಭವು ನನ್ನನ್ನು ತುಂಬಾ ಭಾವುಕರನ್ನಾಗಿಸಿದೆ ಎಂದು ಹೇಳಿದರು.

ನಲ್ಬರಿ ರ್ಯಾಲಿಯ ನಂತರ, ನಾನು ರಾಮಲಲ್ಲಾ ಹಣೆಯ ಮೇಲೆ ಮೂಡಿದ ಸೂರ್ಯರಶ್ಮಿಯನ್ನು ವೀಕ್ಷಣೆ ಮಾಡಿದೆ. ಕೋಟ್ಯಾಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಸೂರ್ಯರಶ್ಮಿ ನಮ್ಮ ಜೀವದಲ್ಲಿ ಶಕ್ತಿಯನ್ನು ತರಲಿ ಹಾಗೂ ವೈಭವದ ಹೊಸ ಎತ್ತರಗಳನ್ನು ಏರಲು ನಮ್ಮ ರಾಷ್ಟ್ರವನ್ನು ಪ್ರೇರೇಪಿಸಲಿ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ರಾಮ ಲಲ್ಲಾನ ಮೇಲೆ ಸೂರ್ಯ ತಿಲಕ ಮೂಡುವ ಸಮಯದಲ್ಲಿ ತಮ್ಮ ಕಾಲಿನಲ್ಲಿದ್ದ ಚಪ್ಪಲಿಯನ್ನು ಕಳಚಿ, ಸೂರ್ಯರಶ್ಮಿ ಸ್ಪರ್ಶವನ್ನು ವೀಕ್ಷಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande