ಭಾರತ-ಉಜ್ಜೇಕಿಸ್ತಾನ ಜಂಟಿ ಸಮಾರಾಭ್ಯಾಸ ಆರಂಭ
ನವದೆಹಲಿ, 16 ಏಪ್ರಿಲ್ (ಹಿ.ಸ):ಆ್ಯಂಕರ್:ಭಾರತ-ಉಜ್ಜೇಕಿಸ್ತಾನ ಜಂಟಿ ಸಮಾರಾಭ್ಯಾಸ- ಡಸ್ಲಿಕ್ ಆರಂಭಗೊಂಡಿದ್ದು, ಇದೇ
Indian Army Contingent Depart


ನವದೆಹಲಿ, 16 ಏಪ್ರಿಲ್ (ಹಿ.ಸ):ಆ್ಯಂಕರ್:ಭಾರತ-ಉಜ್ಜೇಕಿಸ್ತಾನ ಜಂಟಿ ಸಮಾರಾಭ್ಯಾಸ- ಡಸ್ಲಿಕ್ ಆರಂಭಗೊಂಡಿದ್ದು, ಇದೇ ೨೧ರವರೆಗೆ ಉಜ್ಜೇಕಿಸ್ತಾನದಲ್ಲಿ ನಡೆಯಲಿದೆ. ಭಾರತದ ಸಶಸ್ತ್ರ ಪಡೆಯ ಸುಮಾರು ೬೦ ಸಿಬ್ಬಂದಿ ಹಾಗೂ ಉಜ್ಬೇಕಿಸ್ತಾನದಿಂದ ಸುಮಾರು ೧೦೦ ಸಿಬ್ಬಂದಿ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ.

ಈ ಜಂಟಿ ಸಮಾರಾಭ್ಯಾಸ ಮಿಲಿಟರಿ ಸಹಕಾರವನ್ನು ಸದೃಢಗೊಳಿಸುವ ಗುರಿ ಹೊಂದಿದೆ. ಉಭಯ ದೇಶಗಳ ರಕ್ಷಣಾ ಸಿಬ್ಬಂದಿಯ ದೈಹಿಕ ಸಾಮರ್ಥ್ಯ, ಜಂಟಿ ಯೋಜನೆ, ಜಂಟಿ ಯುದ್ಧ ತಂತ್ರ ಮತ್ತು ವಿಶೇಷ ಸಶಸ್ತ್ರ ಕೌಶಲ್ಯಗಳನ್ನು ಈ ಸಮಾರಾಭ್ಯಾಸ ಒಳಗೊಂಡಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande